ರೈಲ್ವೆಯನ್ನ ಮತ್ತಷ್ಟು ಜನಸ್ನೇಹಿಯಾಗಿಸಲು ನಿರ್ಧರಿಸಿರುವ ರೈಲ್ವೆ ಇಲಾಖೆ ಎಕಾನಮಿ ಎಸಿ ಕೋಚ್ ಪರಿಚಯಿಸಲು ಮುಂದಾಗಿದೆ.
ದರ ಜಾಸ್ತಿ ಎಂಬ ಕಾರಣಕ್ಕೆ ಎಸಿ ಕೋಚ್`ಗಳಿಂದ ದೂರ ಸರಿಯುವ ಮಧ್ಯಮ ವರ್ಗಗಳನ್ನ ದೃಷ್ಟಿಯಾಗಿರಿಸಿಕೊಂಡು ಸರ್ಕಾರ ಈ ಹೊಸ ಯೋಜನೆ ರೂಪಿಸುತ್ತಿದೆ. ಎಸಿ-1, ಎಸಿ-2 ಮತ್ತು ಎಸಿ-3 ಜೊತೆ ಎಕಾನಮಿ ಎಸಿ ಕೋಚ್ ಅಳವಡಿಸಲು ನಿಸಿರ್ಧರಿಸಲಾಗಿದೆ. ಎಕಾನಮಿ ಎಸಿ ಟಿಕೆಟ್ ದರ ಈಗಾಗಲೇ ಇರುವ ಇಸಿ ಕೋಚ್`ಗಳಲ್ಲಿ ಅತ್ಯಂತ ಅಗ್ಗ ಎನ್ನಲಾಗುವ ಎ-3ಗಿಂತಲೂ ಕಡಿಮೆ ಇರಲಿದೆ ಎನ್ನಲಾಗುತ್ತಿದೆ.
ಇದರ ಜೊತೆಗೆ ಕೆಲ ಪ್ರದೇಶಗಳಲ್ಲಿ ಸಂಪೂರ್ಣ ಎಸಿ ರೈಲುಗಳನ್ನ ಓಡಿಸಲು ಇಲಾಖೆ ಚಿಂತನೆ ನಡೆಸಿದೆ. ಎಕಾನಮಿ ಎಸಿ ಕೋಚ್ ಅಳವಡಿಕೆಯಿಂದ ಮತ್ತಷ್ಟು ಪ್ರಯಾಣಿಕರು ರೈಲ್ವೆ ಪ್ರಯಾಣದತ್ತ ಮುಖ ಮಾಡುವ ನಿರೀಕ್ಷೆ ಇದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ