Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರೈಲ್ವೆ ಟಿಕೆಟ್ ಅಗ್ಗ, ಸೇವಾಶುಲ್ಕ ಹಿಂಪಡೆತ: ಅರುಣ್ ಜೇಟ್ಲಿ

ರೈಲ್ವೆ ಟಿಕೆಟ್ ಅಗ್ಗ, ಸೇವಾಶುಲ್ಕ ಹಿಂಪಡೆತ: ಅರುಣ್ ಜೇಟ್ಲಿ
ನವದೆಹಲಿ , ಬುಧವಾರ, 1 ಫೆಬ್ರವರಿ 2017 (15:06 IST)
ಕೇಂದ್ರ ಹಣಕಾಸು ಖಾತೆ ಸಚಿವ ಅರುಣ್ ಜೇಟ್ಲಿ ತಮ್ಮ ಬಜೆಟ್‌ನಲ್ಲಿ ರೈಲ್ವೆ ಪ್ರಯಾಣಿಕರಿಗೆ ಸಂತಸ ತರುವ ಸುದ್ದಿ ನೀಡಿದ್ದಾರೆ. ಐಆರ್‌ಸಿಟಿಸಿ ವೆಬ್‌ಸೈಟ್‌ನಿಂದ ಟಿಕೆಟ್ ಬುಕ್ ಮಾಡುವ ರೈಲ್ವೆ ಪ್ರಯಾಣಿಕರ ಸೇವಾ ಶುಲ್ಕವನ್ನು ರದ್ದುಗೊಳಿಸಿದ್ದಾರೆ. 
 
ಇಲ್ಲಿಯವರೆಗೆ ಐಆರ್‌ಸಿಟಿಸಿಯಿಂದ ಎಸಿ-ಕ್ಲಾಸ್‌ ಟಿಕೆಟ್ ಬುಕ್ ಮಾಡುವ ಪ್ರಯಾಣಿಕರಿಗೆ ಪ್ರತಿ ಟಿಕೆಟ್‌ಗೆ 40 ರೂಪಾಯಿ ಸೇವಾ ಶುಲ್ಕ ಪಡೆಯಲಾಗುತ್ತಿತ್ತು. ಸ್ಲೀಪರ್ ಕ್ಲಾಸ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಟಿಕೆಟ್‌ಗೆ 20 ರೂಪಾಯಿ ಸೇವಾ ಶುಲ್ಕ ಭರಿಸಬೇಕಾಗುತ್ತಿತ್ತು. 
 
ಇ-ಟಿಕೆಟ್‌ ಬುಕ್ ಮಾಡುವ ಪ್ರಯಾಣಿಕರ ಸೇವಾ ಶುಲ್ಕವನ್ನು ಹಿಂಪಡೆಯಲಾಗಿದೆ. ನಗದು ರಹಿತ ರಿಸರ್ವೇಶನ್‌ಗಳು ಶೇ.58 ರಿಂದ ಶೇ.68ಕ್ಕೆ ಹೆಚ್ಚಳವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.  
 
ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ರೈಲ್ವೆ ಬಜೆಟ್ ಮತ್ತು ಸಾಮಾನ್ಯ ಬಜೆಟ್‌ನ್ನು ಜಂಟಿಯಾಗಿ ಮಂಡಿಸಿದ ಸಚಿವ ಜೇಟ್ಲಿ, ರೈಲ್ವೆ ಇಲಾಖೆಯ ಒಟ್ಟು ಬಂಡವಾಳ ಮತ್ತು ಅಭಿವೃದ್ಧಿ ವೆಚ್ಚ 2017-2018ರ ಸಾಲಿನಲ್ಲಿ 1, 31000 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ. 
 
ಕೇಂದ್ರ ಸರಕಾರ ರೈಲ್ವೆ ಇಲಾಖೆಯಲ್ಲಿ ಪ್ರಮುಖ ನಾಲ್ಕು ವಿಭಾಗಗಳಲ್ಲಿ ಗುರಿಯಾಗಿಸಿಕೊಂಡಿದ್ದು, ಪ್ರಯಾಣಿಕರ ಸುರಕ್ಷತೆ, ಬಂಡವಾಳ, ಅಭಿವೃದ್ಧಿ ಯೋಜನೆಗಳು, ಸ್ವಚ್ಚತೆ ಮತ್ತು ಆರ್ಥಿಕತೆಯಲ್ಲಿ ಸುಧಾರಣೆ ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಘೋಷಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬಜೆಟ್ 2017: ಪ್ರಶ್ನೆ ಕೇಳಿ, ಉತ್ತರಿಸುತ್ತಾರೆ ಜೇಟ್ಲಿ