ನವದೆಹಲಿ: ಕಾಂಗ್ರೆಸ್ ಪಕ್ಷದವರೇ ಈಗ ತಮ್ಮ ನಾಯಕ ರಾಹುಲ್ ಗಾಂಧಿ ಬಗ್ಗೆ ಬಹಿರಂಗವಾಗಿ ಅಸಮಧಾನ ವ್ಯಕ್ತಪಡಿಸಲು ಪ್ರಾರಂಭಿಸಿದ್ದಾರೆ ಎನ್ನುವುದಕ್ಕೆ ಇಲ್ಲಿದೆ ಮತ್ತೊಂದು ನಿದರ್ಶನ.
ರಾಹುಲ್ ಗಾಂಧಿಗೆ ಪಕ್ಷ ಮುನ್ನಡೆಸುವ ಯೋಗ್ಯತೆಯಿಲ್ಲ ಎಂದು ದೆಹಲಿಯ ಕಾಂಗ್ರೆಸ್ ನಾಯಕಿ ಬರ್ಖಾ ಶುಕ್ಲಾ ಸಿಂಗ್ ಹೇಳಿದ್ದಾರೆ. ಪಕ್ಷದ ಮಹಿಳಾ ಘಟಕಕ್ಕೆ ರಾಜೀನಾಮೆ ನೀಡಿದ ಬಳಿಕ ಅವರು ತಮ್ಮ ನಾಯಕನ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
‘ನಾನು ಮಾತ್ರವಲ್ಲ. ಕಾಂಗ್ರೆಸ್ ನ ಕೆಲವು ಹಿರಿಯ ನಾಯಕರಲ್ಲೂ ಇದೇ ಅಭಿಪ್ರಾಯವಿದೆ. ಆದರೆ ಅವರು ಯಾರೂ ಬಾಯಿಬಿಡುತ್ತಿಲ್ಲ ಅಷ್ಟೆ. ರಾಹುಲ್ ತಮ್ಮನ್ನು ಪ್ರಶ್ನಿಸುವ ನಾಯಕರ ಜತೆ ಸಭೆ ನಡೆಸಲು ಇಷ್ಟಪಡುವುದಿಲ್ಲ. ಹೊಗಳುಭಟ್ಟರಿಗಷ್ಟೇ ಮಣೆ ಹಾಕುತ್ತಾರೆ’ ಎಂದು ಸಿಂಗ್ ಕುಟುಕಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ