ವ್ಯಾಪಂ ಹಗರಣದಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್‌ಗೆ ಸಿಬಿಐ ಕ್ಲೀನ್‌ಚಿಟ್ ನೀಡಿರುವುದನ್ನು ಲೇವಡಿ ಮಾಡಿದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಸ್ವಚ್ಚ ಭಾರತ ಅಭಿಯಾನದಂತೆ ಹಗರಣದಲ್ಲಿರುವವರನ್ನು ಮುಕ್ತಗೊಳಿಸಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ನೈತಿಕತೆಯನ್ನು ಕಸದಬುಟ್ಟಿಯೊಳಗೆ ಎಸೆಯಲಾಗಿದೆ. ಸ್ವಚ್ಚ ಭಾರತ ಅಭಿಯಾನವನ್ನು ವ್ಯಂಗ್ಯವಾಡಿ ಸಾಮಾಜಿಕ ಅಂತರ್ಜಾಲ ತಾಣದಲ್ಲಿ ಟ್ಲೀಟ್ ಮಾಡಿದ್ದಾರೆ.
ಕಳೆದ 2013 ರಲ್ಲಿ ನಡೆದ ಪೂರ್ವ ವೈದ್ಯಕೀಯ ಪರೀಕ್ಷೆಯ ವ್ಯಾಪಂ ಹಗರಣದಲ್ಲಿ ಮೂವರು ಅಧಿಕಾರಿಗಳಾದ ನಿತಿನ್ ಮೊಹಿಂದ್ರಾ, ಅಜಯ್ ಕುಮಾರ್ ಸೇನ್ ಮತ್ತು ಸಿ.ಕೆ.ಮಿಶ್ರಾ ಸೇರಿದಂತೆ 490 ಆರೋಪಿಗಳ ಮೇಲೆ ಕೇಸ್ ದಾಖಲಾಗಿತ್ತು.
ವ್ಯಾಪಂ ಹಗರಣದಲ್ಲಿ ಸಿಬಿಐ ಕ್ಲೀನ್ ಚಿಟ್ ನೀಡಿದ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್‍ಗೆ ನೆಮ್ಮದಿಯ ನಿಟ್ಟುಸಿರುವ ಬಿಡುವಂತಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.