ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇತ್ತೀಚೆಗೆ ಗುಜರಾತ್ ಚುನಾವಣೆಯ ಹಿನ್ನಲೆಯಲ್ಲಿ ಕೆಲವು ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ಆದರೆ ಇದಕ್ಕೆ ಮೊದಲು ಅವರಿಗೆ ದೇವಾಲಯದಲ್ಲಿ ಹೇಗೆ ಕೂರಬೇಕೆಂದೇ ಗೊತ್ತಿರಲಿಲ್ಲವಂತೆ!
ಹಾಗಂದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಟೀಕಿಸಿದ್ದಾರೆ. ‘ಕಾಶಿ ವಿಶ್ವನಾಥ ದೇವಾಲಯಕ್ಕೆ ಬಂದಿದ್ದಾಗ ರಾಹುಲ್ ಗೆ ದೇವಾಲಯದಲ್ಲಿ ಹೇಗೆ ಕೂರಬೇಕೆಂದೇ ಗೊತ್ತಿರಲಿಲ್ಲ. ನಮಾಜ್ ಗೆ ಕೂರುವಂತೆ ಕೂತಿದ್ದರು. ಕೊನೆಗೆ ಅಲ್ಲಿನ ಅರ್ಚಕರು, ಇದು ಮಸೀದಿ ಅಲ್ಲ ದೇವಾಲಯ ಎಂದು ಎಚ್ಚರಿಸಿ ಸರಿಯಾಗಿ ಕೂರಲು ಹೇಳಿಕೊಟ್ಟರು’ ಎಂದು ಸಿಎಂ ಯೋಗಿ ವ್ಯಂಗ್ಯವಾಡಿದ್ದಾರೆ.
ಇತ್ತೀಚೆಗೆ ದೇವಾಲಯಕ್ಕೆ ಸುತ್ತುತ್ತಿರುವ ರಾಹುಲ್ ನಡೆಯನ್ನೂ ಅವರು ಟೀಕಿಸಿದ್ದಾರೆ. ಹಿಂದೂ ದೇವರನ್ನು ಕಾಲ್ಪನಿಕ ಎನ್ನುತ್ತಿದ್ದ ಯುಪಿಎ ನಾಯಕ ಈಗ ದೇವಾಲಯಗಳಿಗೆ ಪ್ರದಕ್ಷಿಣೆ ಬರುತ್ತಿರುವುದು ಯಾಕೋ ಎಂದು ಅವರು ಲೇವಡಿ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ