ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪರಮಾಪ್ತ ಎನಿಸಿಕೊಂಡಿದ್ದ ಅಖಿಲೇಶ್ ಕುಲಕರ್ಣಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯತ್ವ ತ್ಯಜಿಸಿದ್ದು, ಪಕ್ಷದಿಂದಲೇ ಹೊರಬಂದಿದ್ದಾರೆ.
ರಾಹುಲ್ ಗಾಂಧಿಯ ಚುನಾವಣಾ ವ್ಯವಸ್ಥಾಪಕ ಮತ್ತು ಅತಿ ಆಪ್ತ ಎನಿಸಿಕೊಂಡಿದ್ದ ಅಖಿಲೇಶ್ ರಾಜೀನಾಮೆ ನಿಜಕ್ಕೂ ಕಾಂಗ್ರೆಸ್ ಗೆ ಇರಿಸುಮುರಿಸಿನಂತಾಗಿದೆ. ಅಷ್ಟೇ ಅಲ್ಲದೆ, ರಾಜೀನಾಮೆ ನೀಡಿದ ಬಳಿಕ ಕಾಂಗ್ರೆಸ್ ಈಗ ಸ್ವಜನ ಪಕ್ಷಪಾತ ಮತ್ತು ಊಳಿಗ ಪದ್ಧತಿಯ ಪಕ್ಷವಾಗಿ ಮಾರ್ಪಟ್ಟಿದೆ ಎಂದು ಆರೋಪಿಸಿದ್ದಾರೆ.
‘ಪಕ್ಷ ಇಡೀ ಸಂಘಟನೆಯ ವಿಚಾರದಲ್ಲಿ ವಿಫಲವಾಗಿದೆ. ಇದರಿಂದ ಅನಗತ್ಯ ವಿವಾದ, ಕಾನೂನು ಹೋರಾಟಗಳಿಗೆ ಕಾರಣವಾಗುತ್ತಿದೆ. ಪರಿಣಾಮ ಸಾಲು ಸಾಲು ಸೋಲಾಗುತ್ತಿದೆ. ಅಲ್ಲದೆ ಪಕ್ಷ ಇತ್ತೀಚೆಗೆ ತನ್ನ ಘನತೆ ಕಳೆದುಕೊಳ್ಳುತ್ತಿದೆ, ಹಿಂದೂ ವಿರೋಧಿ ಎಂಬ ಹಣೆಪಟ್ಟಿ ಹೊತ್ತುಕೊಳ್ಳುತ್ತಿದೆ’ ಎಂದು ಕುಲಕರ್ಣಿ ವಾಗ್ದಾಳಿ ನಡೆಸಿದ್ದಾರೆ.