ನವದೆಹಲಿ: ವಿರೋಧ ಪಕ್ಷಗಳ ಎರಡು ಪ್ರಮುಖ ರಾಲಿಗಳನ್ನು ಅರ್ಧಕ್ಕೇ ಬಿಟ್ಟು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ.
ನಾರ್ವೆ ರಾಷ್ಟ್ರಕ್ಕೆ ರಾಹುಲ್ ಗಾಂಧಿ ತೆರಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ‘ನಾರ್ವೆಯ ವಿದೇಶಾಂಗ ಸಚಿವರ ಆಹ್ವಾನವನ್ನು ಮನ್ನಿಸಿ ಅಲ್ಲಿಗೆ ತೆರಳುತ್ತಿದ್ದೇನೆ. ಕೆಲವು ದಿನಗಳ ಕಾಲ ಓಸ್ಲೋದಲ್ಲಿರುತ್ತೇನೆ’ ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ವಿರೋಧಿ ಪಕ್ಷಗಳ ನೇತೃತ್ವದಲ್ಲಿ ಎರಡು ಬೃಹತ್ ರಾಲಿ ನಡೆಯಲಿದ್ದು, ಅದಕ್ಕೆ ರಾಹುಲ್ ಗೈರಾಗುವುದು ಬಹುತೇಕ ಪಕ್ಕಾ ಆಗಿದೆ. ಲಾಲೂ ಪ್ರಸಾದ್ ಯಾದವ್ ಅವರ ಬಿಜೆಪಿ ಹಠಾವೋ ಮತ್ತು ಗುಜರಾತ್ ನಲ್ಲಿ ಸೆಪ್ಟೆಂಬರ್ 1 ರಂದು ನಡೆಯಲಿರುವ ಬೃಹತ್ ರಾಜಕೀಯ ಸಮಾವೇಶದಲ್ಲಿ ರಾಹುಲ್ ಭಾಗವಹಿಸುವುದು ಅನುಮಾನವಾಗಿದೆ.
ಎರಡು ಪ್ರಮುಖ ರಾಜಕೀಯ ಸಮಾವೇಶ ಮತ್ತು ಹರಿಯಾಣದಲ್ಲಿ ಹಿಂಸಾಚಾರ ತಾರಕಕ್ಕೇರಿರುವಂತಹ ಪ್ರಮುಖ ಘಟದಲ್ಲೇ ಮತ್ತೆ ರಾಹುಲ್ ವಿದೇಶ ಪ್ರವಾಸಕ್ಕೆ ತೆರಳಿರುವುದು ವಿರೋಧಿಗಳಿಂದ ಟೀಕೆಗೊಳಗಾಗಿದೆ.