ನವದೆಹಲಿ: ಭಾರತೀಯ ಸೇನೆಗೆ ಬಲ ತುಂಬಲು ಫ್ರಾನ್ಸ್ ನಿರ್ಮಿತ ಸುಧಾರಿತ ರಾಫೆಲ್ ಜೆಟ್ ವಿಮಾನಗಳು ಇಂದು ಭಾರತಕ್ಕೆ ಬಂದಿಳಿಯುತ್ತಿವೆ.
ಮೊದಲ ಹಂತವಾಗಿ ಐದು ವಿಮಾನಗಳು ಹರ್ಯಾಣದ ಅಂಬಾಲ ವಾಯುನೆಲೆಗೆ ಬಂದಿಳಿಯಲಿವೆ. ಈ ಯುದ್ಧವಿಮಾನದಲ್ಲಿ ಕೇವಲ 1 ಅಥವಾ ಎರಡು ಆಸನಗಳಿವೆಯಷ್ಟೇ. ಆ ಆಸನಗಳ ಮೇಲೆ ‘ಆರ್ ಬಿ’ ಎಂದು ಬರೆಯಲಾಗಿದೆ.
ಅಷ್ಟಕ್ಕೂ ಈ ಆರ್ ಬಿ ಎಂದರೆ ಏನು ಗೊತ್ತಾ? ಇದು ಹಾಲಿ ಏರ್ ಚೀಫ್ ಮಾರ್ಷಲ್ ಆರ್.ಕೆ.ಎಸ್. ಭದೌರಿಯಾ ಅವರ ಹೆಸರು. ಫ್ರಾನ್ಸ್ ಜತೆಗೆ ರಾಫೆಲ್ ಖರೀದಿ ಒಪ್ಪಂದದಲ್ಲಿ ಭದೌರಿಯಾ ಪ್ರಮುಖ ಪಾತ್ರ ವಹಿಸಿದ್ದರು. ಇದೇ ಕಾರಣಕ್ಕೆ ಅವರ ಗೌರವಾರ್ಥ ಆರ್ ಕೆ ಎಂದು ಬರೆಯಲಾಗಿದೆ.