ನವದೆಹಲಿ: ಇತ್ತೀಚೆಗಷ್ಟೇ ಫ‍್ರಾನ್ಸ್ ನಿಂದ ಬಂದಿಳಿದಿದ್ದ ಸುಧಾರಿತ ರಫೇಲ್ ಯುದ್ಧ ವಿಮಾನಗಳು ಇದೀಗ ಹಿಮಾಚಲ ಪ್ರದೇಶ ಗಡಿಯಲ್ಲಿ ತಾಲೀಮು ನಡೆಸಿ ಶತ್ರು ರಾಷ್ಟ್ರಗಳಿಗೆ ಖಡಕ್ ಎಚ್ಚರಿಕೆ ಕೊಟ್ಟಿದೆ.
ಶತ್ರುಪಾಳಯದ ಎದೆನಡುಗಿಸಬಲ್ಲ ರಫೇಲ್ ಯುದ್ಧ ವಿಮಾನಗಳು ಹಿಮಾಚಲ ಪರ್ವತ ಪ್ರದೇಶದಲ್ಲಿ ನಿನ್ನೆ ರಾತ್ರಿ ವೇಳೆ ತಾಲೀಮು ನಡೆಸಿವೆ. ಇದರೊಂದಿಗೆ ಭಾರತಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ಸಮರಾಂಗಣಕ್ಕಿಳಿದಿವೆ.
ಭಾರತೀಯ ವಾಯುಸೇನೆಯ 12 ಪೈಲಟ್ ಗಳಿಗೆ ರಫೇಲ್ ಚಲಾಯಿಸಲು ತರಬೇತಿ ನೀಡಲಾಗಿತ್ತು. ಈ ಪೈಲಟ್ ಗಳು ಸರಾಗವಾಗಿ ಬೆಟ್ಟ ಗುಡ್ಡಗಳ ನಡುವೆ ರಫೇಲ್ ಚಲಾಯಿಸಿ ಸೈ ಎನಿಸಿಕೊಂಡಿದ್ದಾರೆ. ವಿಶೇಷವಾಗಿ ಲಡಾಖ್ ಗಡಿಯಲ್ಲಿ ತಗಾದೆ ತೆಗೆಯುತ್ತಿರುವ ಚೀನಾಕ್ಕೆ ಇದು ನುಂಗಲಾರದ ಬಿಸಿ ತುಪ್ಪವಾಗಿದೆ.