ಹರಿದ್ವಾರದಲ್ಲಿ ಪರ್ ಕಿ ಪೌಡಿ ಹಬ್ಬದ ಆಚರಣೆ ಸಂದರ್ಭದಲ್ಲಿ ಶೂ ಧರಿಸಿ ಪೂಜೆ ಮಾಡಿದ ಸ್ವಯಂಘೋಷಿತ ದೇವಮಾನವಿ ರಾಧೇ ಮಾ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ.
ಸಾಂಪ್ರದಾಯಕವಾದ ಕೆಂಪು ಸೀರೆಯನ್ನು ಧರಿಸಿ ಕೈಯಲ್ಲಿ ತ್ರಿಶೂಲ ಹಿಡಿದಿದ್ದ ರಾಧೇ ಮಾ, ಶೂ ಧರಿಸಿ ತಮ್ಮ ಭಕ್ತರೊಂದಿಗೆ ಪೂಜೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ವಿವಾದಕ್ಕೆ ಕಾರಣವಾಗಿದೆ.
ಸ್ವಯಂ ಘೋಷಿತ ದೇವಮಾನವಿ ರಾಧೇ ಈ ಹಿಂದೆ ಕೂಡಾ ಹಲವಾರು ವಿವಾದಗಳಿಗೆ ಗ್ರಾಸವಾಗಿದ್ದಾರೆ. ಇತ್ತೀಚೆಗೆ ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಮುಂಬೈ ಪೊಲೀಸರಿಂದ ವಿಚಾರಣೆ ಎದುರಿಸಿದ್ದರು.
ಶೂ ಧರಿಸಿ ಪೂಜೆ ಮಾಡಿದ ರಾಧೇ ಮಾ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಭೋಪಾಲ್ದ ವಕೀಲರೊಬ್ಬರು ಕೋರ್ಟ್ನಲ್ಲಿ ದೂರು ದಾಖಲಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ