ದಕ್ಷಿಣ ಕಾಶ್ಮೀರದ ಪುಲ್ವಾಮಾದ ಟ್ರಾಲ್`ನಲ್ಲಿ ನಡೆಯುತ್ತಿದ್ದ ಭದ್ರತಾ ಸಿಬ್ಬಂದಿ ಮತ್ತು ಉಗ್ರರ ನಡುವಿನ ಗುಂಡಿನ ಚಕಮಕಿ ಅಂತ್ಯಗೊಂಡಿದೆ. ಇಬ್ಬರು ಉಗ್ರರನ್ನ ಹೊಡೆದುರುಳಿಸಲಾಗಿದ್ದು, ಓರ್ವ ಪೊಲೀಸ್ ಪೇದೆ ಹುತಾತ್ಮನಾಗಿದ್ದಾನೆ.
ಹುತಾತ್ಮ ಪೊಲೀಸ್ ಪೇದೆಯನ್ನ ಮನ್ಸೂರ್ ಅಹಮ್ಮದ್ ಖಾನ್ ಎಂದು ಗುರ್ತಿಸಲಾಗಿದೆ.
ಶನಿವಾರದಿಂದ ಇಲ್ಲಿನ ಮನೆಯೊಂದರಲ್ಲಿ ಅಡಗಿದ್ದ ಉಗ್ರರನ್ನ 15 ಗಂಟೆ ಕಾರ್ಯಾಚರಣೆ ನಡೆಸಿ ಹೊಡೆದುರುಳಿಸಲಾಗಿದೆ.
ಭದ್ರತಾ ಕೊಂದ ಬ್ಬರು ಉಗ್ರರಲ್ಲಿ ಓರ್ವ ಹಿಜ್ಬುಲ್ ಮುಜಾಹಿದ್ದಿನ್ ಕಮಾಂಡರ್ ಅಕಿಭ್ ಮೌಲ್ವಿ ಎನ್ನಲಾಗಿದೆ.