ನವದೆಹಲಿ: ಪುಲ್ವಾಮಾದಲ್ಲಿ ಭಾರತೀಯ ಸೈನಿಕರ ಮೇಲೆ ಉಗ್ರರ ದಾಳಿ ನಡೆದು 40 ಸೈನಿಕರು ಹುತಾತ್ಮರಾದ ಘಟನೆಗೆ ಇಂದು ಒಂದು ವರ್ಷ. ಆದರೆ ಈ ಘಟನೆ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ ಹೇಳಿಕೆಯೊಂದು ಈಗ ಭಾರೀ ಟೀಕೆಗೆ ಗುರಿಯಾಗಿದೆ.
ಪುಲ್ವಾಮಾ ದಾಳಿ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ಹುತಾತ್ಮ ಸೈನಿಕರನ್ನು ಸ್ಮರಿಸಿಕೊಂಡಿದ್ದಾರೆ. ಅತ್ತ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು, ಈ ದಾಳಿಯಿಂದ ಲಾಭ ಪಡೆದವರು ಯಾರು ಎಂಬ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಆದರೆ ರಾಹುಲ್ ಅವರ ಈ ಟ್ವೀಟ್ ಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಹುತಾತ್ಮ ಸೈನಿಕರ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಂಡಿದ್ದಕ್ಕೆ ಟೀಕೆ ಮಾಡಿದೆ.
ಟ್ವಿಟರ್ ನಲ್ಲೂ ರಾಹುಲ್ ಸರಣಿ ಪ್ರಶ್ನೆಗಳ ಟ್ವೀಟ್ ಗೆ ಟೀಕೆ ವ್ಯಕ್ತವಾಗಿದ್ದು, ರಾಜಕೀಯಕ್ಕಾಗಿ ಈ ಮಟ್ಟಕ್ಕೆ ಇಳಿಯುತ್ತೀರಾ ಎಂದು ಕೆಲವರು ಪ್ರಶ್ನಿಸಿದರೆ ಮತ್ತೆ ಕೆಲವರು ಯಾರ ಟೀಕೆಗೂ ತಲೆಕೆಡಿಸಿಕೊಳ್ಳದೇ ಬಿಜೆಪಿಯನ್ನು ಪ್ರಶ್ನಿಸುವ ಧೈರ್ಯ ಮಾಡಿದ್ದೀರಿ ಎಂದು ಕೊಂಡಾಡಿದ್ದಾರೆ.