ಪ್ರವಾದಿ ಮತ್ತು ಅವರ ಉತ್ತರಾಧಿಕಾರಿಗಳು ಯಾವತ್ತೂ ಮಾಂಸವನ್ನು ಸೇವಿಸುತ್ತಿರಲಿಲ್ಲ ಅದನ್ನು ರೋಗವೆಂದು ಪರಿಗಣಿಸಿದ್ದರು. ಆದ್ದರಿಂದ ಭಾರತೀಯ ಮುಸ್ಲಿಮ್ ಸಮುದಾಯ ಮಾಂಸ ಸೇವನೆ ತ್ಯಜಿಸುವುದು ಒಳಿತು ಎಂದು ಆರೆಸ್ಸೆಸ್ ಮುಖಂಡ ಇಂದ್ರೇಶ್ ಕುಮಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಆರ್‌ಎಸ್‌ಎಸ್‌ನ ಮುಸ್ಲಿಂ ವಿಭಾಗವಾದ ಮುಸ್ಲಿಂ ರಾಷ್ಟ್ರೀಯ ಮಂಚ್ ಸೋಮವಾರ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಸಂಘಟಿಸಿದ ಇಫ್ತಾರ್ ಕೂಟದಲ್ಲಿ ಅವರು ಮಾತನಾಡುತ್ತಿದ್ದರು.
ವಿಶ್ವವಿದ್ಯಾನಿಲಯದ ಕ್ರೀಡಾ ಸಂಕೀರ್ಣದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಂ ರಾಷ್ಟ್ರೀಯ ಮಂಚ್ ದೇಶದ ಮುಸ್ಲಿಮರಿಗೆ ಮೂರು ಪ್ರಾಥಮಿಕ ಮನವಿಗಳನ್ನು ಮಾಡಿದೆ ಎಂದು ತಿಳಿಸಿದ್ದಾರೆ.
"ಮೊದಲನೆಯದಾಗಿ, ರಮ್ಜಾನ್ ಸಮಯದಲ್ಲಿ, ಅವರು ತಮ್ಮ ಪ್ರದೇಶಗಳಲ್ಲಿ, ಮಸೀದಿಗಳು ಮತ್ತು ದರ್ಗಾಗಳಲ್ಲಿ ಮರಗಳು ನೆಡಬೇಕು, ಆದ್ದರಿಂದ ಮಾಲಿನ್ಯವನ್ನು ನಿಭಾಯಿಸಬಹುದು ಮತ್ತು ಪರಿಸರವನ್ನು ರಕ್ಷಿಸಬಹುದು. ಎರಡನೆಯದಾಗಿ, ಅವರು ತುಳಸಿ ಸಸ್ಯವನ್ನು ತಮ್ಮ ಮನೆಗಳಲ್ಲಿ ಇರಿಸಬೇಕು, ಏಕೆಂದರೆ ಅದು ಅರೇಬಿಯನ್ ಮತ್ತು ಇನ್ಸ್ ಜಾನ್ನಾತ್ ನಸೀಬ್ ರೆಹನ್ (ಜನ್ನಾತ್ ಕಿ ಝಾದ್) ಎಂದು ಕರೆಯಲ್ಪಡುತ್ತದೆ ಎಂದು ಅವರು ಹೇಳಿದರು.
ಮೂರನೆಯದಾಗಿ, ಪ್ರವಾದಿ ಮತ್ತು ಅವರ ಉತ್ತರಾಧಿಕಾರಿಗಳು ಮಾಂಸವನ್ನು ಸೇವಿಸಲಿಲ್ಲ. ಮಾಂಸ ಒಂದು ಕಾಯಿಲೆಯಾಗಿದೆ. ಹಾಲು ಕಾಯಿಲೆಗೆ ಪರಿಹಾರವಾಗಿರುವುದರಿಂದ ಹಾಲು ಸೇವಿಸುವುದು ಉತ್ತಮ ಎಂದರು.
ಕೂಟವನ್ನು ಉದ್ದೇಶಿಸಿ ಮಾತನಾಡಿದ ಕುಮಾರ್, ಭಾರತೀಯ ಮುಸ್ಲಿಮರು "ಇಸ್ಲಾಂ ಧರ್ಮವನ್ನು ಆಕರ್ಷಕವಾಗಿಸಲು ಹೋರಾಟ ಮಾಡಬೇಕೇ ಹೊರತು ಅಸಹ್ಯವಾಗಿಸಲು ಹೋರಾಟ ಮಾಡಬಾರದು ಎಂದು ಆರೆಸ್ಸೆಸ್ ಮುಖಂಡ ಇಂದ್ರೇಶ್ ಕುಮಾರ್ ಮನವಿ ಮಾಡಿದ್ದಾರೆ.
ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
http://kannada.fantasycricket.webdunia.com/
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.