ಬೆಳಗಾವಿ : ಎಂಇಎಸ್ ನ ಮಾಜಿ ಶಾಸಕ ಸಂಭಾಜಿ ಪಾಟೀಲ್ ಅವರಿಗೆ ಎರಡು ಮಗು ಹುಟ್ಟಿದೆ ಎಂಬ ಕೆಲವು ದಾಖಲೆಗಳು ಬಹಿರಂಗಗೊಂಡ ಹಿನ್ನಲೆಯಲ್ಲಿ ಸಂಭಾಜಿ ಪಾಟೀಲ್ ಇಳಿ ವಯಸ್ಸಿನಲ್ಲೂ ಗಂಡು ಮಗುವಿಗೆ ತಂದೆಯಾದರಾ ಎಂಬ ಅನುಮಾನ ಹುಟ್ಟು ಹಾಕಿದೆ.
ಸಂಭಾಜಿ ಪಾಟೀಲ್ ಇಲ್ಲಿಯವರೆಗೆ ನನಗೆ ಒಬ್ಬನೇ ಮಗ ಇದ್ದಾನೆ ಎಂದು ಹೇಳಿಕೊಂಡಿದ್ದರು. ಆದರೆ 2016ರಲ್ಲಿ ಮಹಾರಾಷ್ಟ್ರದ ಸಾಂಗ್ಲಿಯ ಸ್ವಾನಂದ ನರ್ಸಿಂಗ್ ಹೋಮ್ ನಲ್ಲಿ ಸಂಭಾಜಿ ಪಾಟೀಲ್ ಅವರ ಎರಡನೇ ಪತ್ನಿ ಉಜ್ವಲಾ ಗಂಡು ಮಗುವಿಗೆ ಜನ್ಮ ನೀಡಿದ ಕೆಲವು ದಾಖಲೆಗಳು ಬಹಿರಂಗಗೊಂಡಿದೆ.
ಆದರೆ ಇವರ ಸೊಸೆ ಶೀತಲ್ ಸಾಂಗ್ಲಿ ಅವರು, ಮೂರು ವರ್ಷದ ಹಿಂದೆ ಹುಟ್ಟಿರುವುದು ಮಗ ಅಲ್ಲ. ಅದು ನಕಲಿ ಜನನ ಪ್ರಮಾಣ ಪತ್ರ. ಆಸ್ತಿಗಾಗಿ ನಕಲಿ ಜನ್ಮ ಪ್ರಮಾಣ ಪತ್ರ ಪಡೆದು ಸೊಸೆಗೆ ವಂಚಿಸಲು ಯತ್ನಿಸುತ್ತಿದ್ದಾರೆ. ತಕ್ಷಣ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಮಾವನ ವಿರುದ್ಧ ದೂರು ದಾಖಲಿಸಿದ್ದಾರೆ. ಹಾಗೇ ಕಳೆದ ಮೂರು ತಿಂಗಳ ಹಿಂದೆ ಚಲಿಸುವ ರೈಲಿನಲ್ಲಿ ಆಯತಪ್ಪಿ ಬಿದ್ದು ಮಗ ಸಾಗರ್ ಮೃತ ಪಟ್ಟಿದ್ದು, ಸಹಜ ಸಾವಲ್ಲ ಅದು ಕೊಲೆ ಎಂದು ಸೊಸೆ ಶೀತಲ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.