Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

7 ಕೋಟಿಗೆ ತನ್ನ 2 ಅಪಾರ್ಟ್ಮೆಂಟ್ ಸೇಲ್ ಮಾಡಿದ ಪ್ರಿಯಾಂಕಾ ಚೋಪ್ರಾ!

7 ಕೋಟಿಗೆ ತನ್ನ 2 ಅಪಾರ್ಟ್ಮೆಂಟ್ ಸೇಲ್ ಮಾಡಿದ ಪ್ರಿಯಾಂಕಾ ಚೋಪ್ರಾ!
ಬೆಂಗಳೂರು , ಶುಕ್ರವಾರ, 23 ಜುಲೈ 2021 (11:37 IST)
ಪ್ರಿಯಾಂಕಾ ಚೋಪ್ರಾ ಅವರು ಅಂಧೇರಿ ಪಶ್ಚಿಮದ ಒಶಿವಾರಾದಲ್ಲಿರುವ ಎರಡನೇ ಮಹಡಿಯಲ್ಲಿರುವ ಕಚೇರಿಯನ್ನು ಜೂನ್ ತಿಂಗಳಿನಲ್ಲಿ ಮಾರಾಟ ಮಾಡಿದ್ದಾರೆ.  2040 ಸ್ಕ್ಯಾರ್ಫೀಟ್ ಹೊಂದಿರುವ ಈ ಮಹಡಿ ಇದಾಗಿದ್ದು, ಜ್ಯಾಪ್ಕೀ.ಕಾಮ್ ಸೈಟಿನಲ್ಲಿರುವ ದಾಖಲೆಯಲ್ಲಿ ದೃಢವಾಗಿದೆ.

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮುಂಬೈ, ಗೋವಾ ಮತ್ತು ನ್ಯೂಯಾರ್ಕ್ನಲ್ಲಿ ಆಸ್ತಿಯನ್ನು ಹೊಂದಿದ್ದಾರೆ. ಇದೀಗ ನಟಿ ರಿಯಲ್ ಎಸ್ಟೇಟ್ ಫೋರ್ಟ್ಫೋಲಿಯೋದಲ್ಲಿ ಕೆಲವು ಹೋಂದಾಣಿಕೆಯನ್ನು ಮಾಡಿದ್ದು, ಕಚೇರಿ ಸ್ಥಳವನ್ನು ಗುತ್ತಿಗೆ ನೀಡುವ ಮತ್ತು ಕೆಲವು ವಸತಿ ಸ್ಥಳವನ್ನು ಮಾರಾಟ ಮಾಡಿದ್ದಾರೆ.
ಪ್ರಿಯಾಂಕಾ ಚೋಪ್ರಾ ಅವರು ಅಂಧೇರಿ ಪಶ್ಚಿಮದ ಒಶಿವಾರಾದಲ್ಲಿರುವ ಎರಡನೇ ಮಹಡಿಯಲ್ಲಿರುವ ಕಚೇರಿಯನ್ನು ಜೂನ್ ತಿಂಗಳಿನಲ್ಲಿ ಮಾರಾಟ ಮಾಡಿದ್ದಾರೆ.  2040 ಸ್ಕ್ಯಾರ್ಫೀಟ್ ಹೊಂದಿರುವ ಈ ಮಹಡಿ ಇದಾಗಿದ್ದು, ಜ್ಯಾಪ್ಕೀ.ಕಾಮ್ ಸೈಟಿನಲ್ಲಿರುವ ದಾಖಲೆಯಲ್ಲಿ ದೃಢವಾಗಿದೆ.
ಬಾಡಿಗೆ ಒಪ್ಪಂದವನ್ನು ಜೂನ್ 3 ರಂದು ನೋಂದಾಯಿಸಲಾಗಿದೆ.
ಕಳೆ ತಿಂಗಳು ಮಾರ್ಚ್ನಲ್ಲಿ ’ದಿ ಸ್ಕೈ ಈಸ್ ಪಿಂಕ್’ ಮತ್ತು ಹಾಲಿವುಡ್ ವಿಡಂಬನಾತ್ಮಕ ಡ್ರಾಮಾ ‘ದಿ ವೈಟ್ ಟೈಗರ್’ನಲ್ಲಿ ನಟಿಸಿದ್ದರು. ಆ ಬಳಿಕ ರಾಜ್ ಕ್ಲಾಸಿಕ್ , ವರ್ಸೋವಾ, ಅಂಧೇರಿಯಲ್ಲಿರುವ ವಸತಿಯನ್ನು 7 ಕೋಟಿಗೆ ಮಾರಾಟ ಮಾಡಿದ್ದಾರೆ.
7ನೇ ಮಳಿಗೆಯಲ್ಲಿರುವ 888 ಸ್ಕ್ಯಾರ್ ಫೀಟ್ ಹೊಂದಿರುವ ವಸತಿಯನ್ನು  3 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆ. ನೋಂದಣೆ ದಾಖಲೆಗಳ ಪ್ರಕಾರ 1219 ಚದರ ಅಡಿ ಗಾತ್ರದ ಒಂದೇ ಮಹಡಿಯಲ್ಲಿರುವ ಮತ್ತೊಂದು ಘಟಕವನ್ನು 4 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ. ಈ ಮಳಿಗೆಯ ಮೇಲೆ 12 ಲಕ್ಷ ಸ್ಟ್ಯಾಂಪ್ ಡ್ಯೂಟಿ ಪಾವತಿಸಲಾಗಿದೆ ಎಂದು ದಾಖಲೆಗಳು ತಿಳಿಸಿದೆ.
ಕಳೆದ ವರ್ಷ ಅಂಧೇರಿಯ ಪಶ್ಚಿಮದ  ಲೋಖಂಡ್ವಾಲಾ ಕಾಂಪ್ಲೆಕ್ಸ್ನ ಕರಣ್ ಅಪಾರ್ಟ್ಮೆಂಟ್ನಲ್ಲಿರುವ ನಾಲ್ಕನೇ ಮಹಡಿಯಲ್ಲಿರುವ ಅಪಾರ್ಟ್ಮೆಂಟ್ ಅನ್ನು 2 ಕೋಟಿ ರೂ.ಗೆ ಮಾರಾಟ ಮಾಡಿದ್ದರು
ಇನ್ನು ನಟಿ ಮಾಧುರಿ ದೀಕ್ಷಿತ್ ಅವರು 11ನೇ ಮಹಡಿಯಲ್ಲಿ ಎರಡು ಅಪಾರ್ಟ್ಮೆಂಟ್ ಅನ್ನು 2017ರ ಜೂನ್ ತಿಂಗಳಿನಲ್ಲಿ 8.18 ಕೋಟಿ ರೂ. ಗೆ ಮಾರಾಟ ಮಾಡಿದ್ದಾರೆ.ಪಿಗ್ಗಿ ಮುಂಬೈನಲ್ಲಿ ಹಲವಾರು ಅಪಾರ್ಟ್ಮೆಂಟ್ ಹೊಂದಿದ್ದಾರೆ. ಪಿಗ್ಗಿ ಮತ್ತು ಪತಿ ನಿಕ್ ಜೊನಸ್ ಇತ್ತೀಚೆಗೆ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದ್ದರು.
ಸದ್ಯ ಪತಿಯೊಂದಿಗೆ ಪಿಗ್ಗಿ ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ನ ಎನ್ಸಿನೊದಲ್ಲಿ ವಾಸಿಸುತ್ತಿದ್ದಾರೆ. ಇದು 7 ಮಲಗುವ ಕೋಣೆ ಮತ್ತು 11 ಸ್ನಾನದ ಗೃಹವನ್ನು ಹೊಂದಿದೆ. ಅದರ ಜತೆಗೆ ಬೃಹತ್ ಹೊರಾಂಗಣ ವಲಯ, ಸ್ವಿಮ್ಮಿಂಗ್ ಪೂಲ್ ಹೊಂದಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಎಲ್ಲರಿಗೂ ಪಿಯುಸಿ ಅಡ್ಮಿಶನ್ ಗ್ಯಾರಂಟಿ: ಸುರೇಶ್ ಕುಮಾರ್