ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಚಂದ್ರಯಾನ-3 ಯಶಸ್ಸನ್ನು ಪ್ರಸ್ತಾಪಿಸಿದ್ದಾರೆ. ಬುಧವಾರ, ಚಂದ್ರಯಾನ-3ದ ವಿಕ್ರಮ್ ಲ್ಯಾಂಡರ್ ಸಂಜೆ ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸುವ ಮೂಲಕ ಇತಿಹಾಸವನ್ನು ಬರೆದಿದೆ.
ಈ ಮೈಲಿಗಲ್ಲಿನ ಬಗ್ಗೆ ಅತ್ಯಂತ ಹೆಮ್ಮೆಯಿಂದ ಮಾತನಾಡಿದ ಪ್ರಧಾನಿ, “ನಿನ್ನೆ ಭಾರತದ ಚಂದ್ರಯಾನ-3 ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಿತು. ಇದು ಭಾರತಕ್ಕೆ ಮಾತ್ರವಲ್ಲದೆ ಜಾಗತಿಕ ವೈಜ್ಞಾನಿಕ ಸಮುದಾಯಕ್ಕೂ ದೊಡ್ಡ ಸಾಧನೆಯಾಗಿದೆ ಎಂದು ಹೇಳಿದ್ದಾರೆ.
ಈ ಸಾಧನೆಯನ್ನು ಎಲ್ಲಾ ಮಾನವೀಯತೆಯ ಸಾಧನೆ ಎಂದು ಒಪ್ಪಿಕೊಳ್ಳುತ್ತಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಭಾರತ, ಅದರ ಜನರು ಮತ್ತು ನಮ್ಮ ವಿಜ್ಞಾನಿಗಳ ಪರವಾಗಿ ಈ ಐತಿಹಾಸಿಕ ಕ್ಷಣದಲ್ಲಿ ಹಾರೈಸಿದ ವಿಜ್ಞಾನಿಗಳು ಮತ್ತು ವಿಶ್ವದ ವೈಜ್ಞಾನಿಕ ಸಮುದಾಯಕ್ಕೆ ನಾನು ಧನ್ಯವಾದ ಹೇಳುತ್ತೇನೆ ಎಂದು ಮೋದಿ ಹೇಳಿದ್ದಾರೆ.