Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪ್ರಧಾನಿ ನರೇಂದ್ರಮೋದಿಗೆ ಇಸ್ರೇಲ್`ನಲ್ಲಿ ವಿಶಿಷ್ಟ ಸ್ವಾಗತ

ಪ್ರಧಾನಿ ನರೇಂದ್ರಮೋದಿಗೆ ಇಸ್ರೇಲ್`ನಲ್ಲಿ ವಿಶಿಷ್ಟ ಸ್ವಾಗತ
ಟೆಲ್ ಅವಿವ್ , ಮಂಗಳವಾರ, 4 ಜುಲೈ 2017 (18:49 IST)
ಪ್ರಧಾನಮಂತ್ರಿ ನರೇಂದ್ರಮೋದಿ 3 ದಿನಗಳ ಪ್ರವಾಸಕ್ಕಾಗಿ ಇಸ್ರೆಲ್ ದೇಶಕ್ಕೆ ತೆರಳಿದ್ದು, ಟೆಲ್ ಅವಿವ್ ವಿಮಾನ ನಿಲ್ದಾಣದಲ್ಲಿ ನರೇಂದ್ರಮೋದಿಗೆ ಅದ್ದೂರಿ ಸ್ವಾಗತ ನೀಡಲಾಗಿದೆ.

ಸ್ವತಃ ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೇತಾನ್ಯುಹು ಏರ್`ಪೋರ್ಟ್`ನಲ್ಲಿ ನರೇಂದ್ರಮೊದಿಗೆ ಸ್ವಾಗತ ಕೋರಿದರು. ವೆಲ್ ಕಂ ಮೈ ಫ್ರೆಂಡ್ ಎನ್ನುತ್ತಾ ಆದರದಿಂದ ಬರಮಾಡಿಕೊಂಡರು. ಅಮೆರಿಕ ಅಧ್ಯಕ್ಷರು ಮತ್ತು ಪೋಪ್`ಗೆ ಮಾತ್ರವೇ ನೀಡುತ್ತಿದ್ದ ಸಾಂಪ್ರದಾಯಿಕ ಸ್ವಾಗತವನ್ನ ಮೋದಿಗೆ ನೀಡಲಾಯ್ತು.

ಇದೇ ಮೊದಲ ಬಾರಿಗೆ ಭಾರತ ದೇಶದ ಪ್ರಧಾನಮಂತ್ರಿಯೊಬ್ಬರು ಇಸ್ರೇಲ್ ದೇಶಕ್ಕೆ ಭೇಟಿ ನೀಡಿದ್ದಾರೆ. ಆಹಾರ ಭದ್ರತೆ, ಕೃಷಿ, ನೀರಾವರಿ, ಬಾಹ್ಯಾಕಾಶ, ಭದ್ರತೆ ಹಲವು ಒಪ್ಪಂದಗಳಿಗೆ ಉಭಯ ರಾಷ್ಟ್ರಗಳ ಮುಖಂಡರು ಸಹಿ ಹಾಕಲಿದ್ದಾರೆ. ಕೃಷಿ, ರಕ್ಷಣಾ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದಿರುವ ಇಸ್ರೇಲ್ ತಂತ್ರಜ್ಞಾನದ ನೆರವು ಭಾರತಕ್ಕೆ ಸಿಗಲಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ದಲಿತ ಕುಟುಂಬಗಳಿಗೆ ಭೋಜನ ಕೂಟ ಏರ್ಪಡಿಸಿದ ಬಿಎಸ್‌ವೈ