ಅಯೋಧ್ಯಾ : ಕಳೆದ ಹನ್ನೊಂದು ದಿನಗಳಿಂದ ವೃತವನ್ನು ಆಚರಿಸುತ್ತಿರುವ ಪ್ರಧಾನಿ ಮೋದಿ ಉಪವಾಸವನ್ನೂ ಸಹ ಕೈಗೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿ ರಾಮಮಂದಿರಕ್ಕೆ ಆಗಮಿಸಿದ್ದು ಈಗಿನಿಂದಲೇ ರಾಮಪ್ರತಿಷ್ಠಾಪನೆಯ ಪೂಜಾವಿಧಿವಿಧಾನಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಅರ್ಚಕರು ಸೇರಿದಂತೆ ಕೇವಲ ಐದು ಮಂದಿಯ ಸಮ್ಮುಖದಲ್ಲಿ ಗರ್ಭಗುಡಿಯಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆ ನೆರವೇರಲಿದೆ. ಕೋಟ್ಯಂತರ ಮಂದಿ ಈಗಾಗಲೇ ಅಯೋಧ್ಯೆಯಲ್ಲಿ ನೆರೆದಿದ್ದರೆ, ಅಸಂಖ್ಯಾತ ಮಂದಿ ಟಿವಿ ಮತ್ತಿತರ ಮಾಧ್ಯಮಗಳ ಮೂಲಕ ಪ್ರತಿಷ್ಠಾಪನಾ ಕಾರ್ಯವನ್ನು ಕಣ್ತುಂಬಿಕೊಳ್ಳಲಿದ್ದಾರೆ.