ಸದ್ಯದಲ್ಲೇ ಚುನಾವಣೆಯನ್ನು ಎದುರಿಸಲಿರುವ ಉತ್ತರ ಪ್ರದೇಶದಲ್ಲಿ ಕಳೆದೊಂದು ವರ್ಷದಲ್ಲಿ ಕಾಂಗ್ರೆಸ್ ಸೇರಿರುವ ಕಾರ್ಯಕರ್ತರ ಸಂಖ್ಯೆ 6 ಲಕ್ಷ ದಾಟಿದೆ. ರಾಜಕೀಯ ತಂತ್ರಗಾರಿಕೆ ನಿಪುಣರಾಗಿ ಪ್ರಶಾಂತ್ ಕಿಶೋರ್ ಅಧಿಕಾರ ಸ್ವೀಕರಿಸಿದ ಪರಿಣಾಮವಿದು ಎನ್ನುತ್ತವೆ ಪಕ್ಷದ ಮೂಲಗಳು.
ಜವಾಬ್ದಾರಿ ಸಂಭಾಳಿಸಿದ ಬಳಿಕ ಕಿಶೋರ್, ಮತಗಟ್ಟೆ ಮಟ್ಟದಲ್ಲಿ ಸಮಿತಿಗಳನ್ನು ರಚಿಸುವಂತೆ ಅವರು ಪಕ್ಷದ ನಾಯಕರಿಗೆ ಸೂಚನೆ ನೀಡಿದರು. 75 ಜಿಲ್ಲೆಗಳ 1.2 ಲಕ್ಷ ಬೂತ್‌ಗಳಲ್ಲಿ ಇದನ್ನು ಕಾರ್ಯಗತಗೊಳಿಸಲಾಯ್ತು ಎಂದು ಮೂಲಗಳು ತಿಳಿಸಿವೆ.
405 ವಿಧಾನಸಭಾ ಸೀಟುಗಳಿಗೆ 7,000 ಅರ್ಜಿಗಳು ಬಂದಿದ್ದು, ಹೊಸ ಕಾರ್ಯಕರ್ತರನ್ನು ಸೇರಿಸುವುದರ ಮೂಲಕ ನಿಮ್ಮ ವರ್ಚಸ್ಸನ್ನು ಸಾಬೀತು ಪಡಿಸಿ ಸೂಚಿಸಲಾಗಿದೆ ಎಂದು ಕೈ ಮುಖಂಡರು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ