Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪ್ರತಿಷ್ಠಿತ ವಿಶ್ವವಿದ್ಯಾಲಯದ ಪ್ರೊಫೆಸರ್ ನಿಂದ ಫೇಸ್‍ಬುಕ್ ನಲ್ಲಿ ಯುವತಿಯರ ಕನ್ಯತ್ವದ ಬಗ್ಗೆ ಅಶ್ಲೀಲ ಪೋಸ್ಟ್

ಪ್ರತಿಷ್ಠಿತ  ವಿಶ್ವವಿದ್ಯಾಲಯದ ಪ್ರೊಫೆಸರ್ ನಿಂದ ಫೇಸ್‍ಬುಕ್ ನಲ್ಲಿ ಯುವತಿಯರ ಕನ್ಯತ್ವದ ಬಗ್ಗೆ ಅಶ್ಲೀಲ ಪೋಸ್ಟ್
ಕೋಲ್ಕತ್ತಾ , ಸೋಮವಾರ, 14 ಜನವರಿ 2019 (10:34 IST)
ಕೋಲ್ಕತ್ತಾ : ಕೋಲ್ಕತ್ತಾದ ಪ್ರತಿಷ್ಠಿತ ಜಾಧವ್‍ಪುರ ವಿಶ್ವವಿದ್ಯಾಲಯದ ಪ್ರೊಫೆಸರ್ ಒಬ್ಬರು ಯುವತಿಯರ ಕನ್ಯತ್ವವನ್ನು ತಂಪು ಪಾನೀಯಕ್ಕೆ ಹೋಲಿಸಿ ಫೇಸ್‍ಬುಕ್ ನಲ್ಲಿ ಅಶ್ಲೀಲವಾದ ಪೋಸ್ಟ್ ಅನ್ನು ಪ್ರಕಟಿಸುವುದರ ಮೂಲಕ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ.


20 ವರ್ಷ ಬೋಧನ ಅನುಭವ ಮತ್ತು ಪಿಎಚ್‍ಡಿ ಮಾರ್ಗದರ್ಶಕರಾಗಿರುವ ಪ್ರೊಫೆಸರ್ ಕನಕ್ ಸರ್ಕಾರ್  ತಮ್ಮ ಫೇಸ್ ಬುಕ್ ನಲ್ಲಿ, ನೀವು ಸೀಲ್ ಒಡೆದಿರುವ ತಂಪು ಪಾನೀಯವನ್ನು ಖರೀದಿ ಮಾಡುತ್ತೀರಾ ಅಥವಾ ಪ್ಯಾಕ್ ಆಗಿರುವ ಬಿಸ್ಕೇಟ್ ಅನ್ನು ಖರೀದಿ ಮಾಡುತ್ತೀರಾ ಎಂದು ಯುವತಿಯರ ಕನ್ಯತ್ವದ ಕುರಿತಾಗಿ ಯುವಕರಿಗೆ ಪ್ರಶ್ನೆ ಮಾಡಿದ್ದಾರೆ.


ಕನ್ಯತ್ವ ಹೊಂದಿರುವ ಯುವತಿಯರ ಬಗ್ಗೆ ಈಗಿನ ಹುಡುಗರಿಗೆ ಅರಿವು ಇಲ್ಲ. ಹುಡುಗಿ ಸೀಲ್ ಆಗಿದ್ದರೆ ಆಕೆ `ದೇವತೆ’. ಹುಟ್ಟಿನಿಂದ ಸೀಲ್ ಓಪನ್ ಆಗುವರೆಗೂ ಆಕೆ ಹುಡುಗಿಯಾಗಿರುತ್ತಾಳೆ. ಮದುವೆಯ ಸಮಯದಲ್ಲೂ ಕನ್ಯತ್ವವನ್ನು ಉಳಿಸಿಕೊಂಡಿದ್ದಾಳೆ ಎಂದರೆ ಆಕೆ ಉತ್ತಮ ಗುಣ ನಡತೆಯ ಜೊತೆ ಸುಸಂಸ್ಕೃತೆ ಎಂದರ್ಥ. ಇಂದಿನ ಕಾಲದಲ್ಲಿ ಹುಡುಗರು, ಹುಡುಗಿಯರು ಬ್ರಹ್ಮಚರ್ಯೆ ಮತ್ತು ಕನ್ಯತ್ವದ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳುವುದಿಲ್ಲ. ಈ ಕಾರಣಕ್ಕೆ ಹುಡುಗಿಯರು ಹುಡುಗರ ಕುತಂತ್ರಕ್ಕೆ ಬಲಿಯಾಗುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.


ಹಾಗೇ ಪಾಶ್ಚಿಮಾತ್ಯ ಜೀವನ ಶೈಲಿ ಅಳವಡಿಸಿಕೊಂಡ ಕಾರಣ ಇಂದಿನ ಯುವಕ, ಯುವತಿ ಹಾಳಾಗುತ್ತಿದ್ದಾರೆ. ಹೀಗಾಗಿ ಇವರಿಗೆ ಕನ್ಯತ್ವದ ಮಹತ್ವವೇ ತಿಳಿದಿಲ್ಲ ಎಂದು ದೂರಿದ್ದಾರೆ. ಈ ರೀತಿ ಪೋಸ್ಟ್ ಮಾಡಿರುವ ಕನಕ್ ಸರ್ಕಾರ್ ತನ್ನ ಅಭಿಪ್ರಾಯಗಳು ವಿವಾದಕ್ಕೆ ಕಾರಣವಾಗುತ್ತಿದೆ ಎನ್ನುವುದನ್ನು ತಿಳಿದು ಎಲ್ಲ ಪೋಸ್ಟ್ ಗಳನ್ನು ಈಗ ಡಿಲೀಟ್ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಿಯಕರನ ಜೊತೆಗೆ ಪಾರ್ಕ್ ನಲ್ಲಿ ಕುಳಿತಿದ್ದ ಬಾಲಕಿಯ ಮೇಲೆ ಅತ್ಯಾಚಾರ