ನವದೆಹಲಿ: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಿಂದ ಬಂಧನ ಆದೇಶಕ್ಕೊಳಗಾದ ಕೋಲ್ಕೊತ್ತಾ ಹೈಕೋರ್ಟ್ ನ್ಯಾಯಾಧೀಶ ಜಸ್ಟಿಸ್ ಕರ್ಣನ್ ನಾಪತ್ತೆಯಾಗಿದ್ದಾರೆ.
ಅವರ ಬಂಧನಕ್ಕಾಗಿ ಮೂರು ರಾಜ್ಯಗಳ ಪೊಲೀಸರು ತೀವ್ರ ಹುಡುಕಾಟದಲ್ಲಿದ್ದಾರೆ. ಸುಪ್ರೀಂ ಕೋರ್ಟ್ ನ ನ್ಯಾಯಧೀಶರ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿದ್ದಲ್ಲದೆ, ಅವರ ವಿರುದ್ಧವೇ ಐದು ವರ್ಷಗಳ ಸಜೆ ಘೋಷಿಸಿದ್ದ ಕರ್ಣನ್ ಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.
ಈ ರೀತಿ ಹಾಲಿ ನ್ಯಾಯಾಧೀಶರ ವಿರುದ್ಧ ಬಂಧನ ವಾರಂಟ್ ಹೊರಡಿಸಿರುವುದು ದೇಶದ ಇತಿಹಾಸದಲ್ಲೇ ಮೊದಲಾಗಿದೆ. ಇದೀಗ ಅವರು ತಲೆ ಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಪ.ಬಂಗಾಲ, ಆಂಧ್ರ ಪ್ರದೇಶ ಮತ್ತು ತಮಿಳುನಾಡು ಪೊಲೀಸರು ಬಲೆ ಬೀಸಿದ್ದಾರೆ.
ಕರ್ಣನ್ ಬಂಧನ ಆದೇಶ ಬರುವಾಗ ಆಂಧ್ರಪ್ರದೇಶದ ಅತಿಥಿ ಗೃಹದಲ್ಲಿದ್ದರು. ನಂತರ ಅಲ್ಲಿಂದ ಬಿಲ್ ಪಾವತಿಸದೇ ತೆರಳಿದ್ದರು. ಬಹುಶಃ ಅವರು ನೆರೆಯ ಆಂಧ್ರ ಪ್ರದೇಶಕ್ಕೆ ಸಾಗಿರಬಹುದು ಎಂದು ಶಂಕಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ