ಲಂಚ ಸ್ವೀಕರಿಸಿ ಸಿಕ್ಕಿಬಿದ್ದಿದ್ದ ಪೊಲೀಸ್ ಅಧಿಕಾರಿ ವಿರುದ್ಧ ಕೊನೆಗೂ ಹೈದರಾಬಾದ್ ಪೊಲೀಸರು ಕ್ರಮ ಕೈಗೊಂಡಿದ್ದು, ಟ್ರಾಫಿಕ್ ಸೇವೆಯಿಂದ ಅಮಾನತು ಮಾಡಲಾಗಿದೆ. ಶ್ರೀಧರ್ ವೆಮುಲಾ ಎಂಬ ಹೈದರಾಬಾದ್ ನಿವಾಸಿ ಫೇಸ್ಬುಕ್`ನಲ್ಲಿ ಶೇರ್ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು.
ವಿಡಿಯೋದಲ್ಲಿ ಏನಿತ್ತು..?: ಪೊಲೀಸ್ ಅಧಿಕಾರಿಯೊಬ್ಬ ಮಧ್ಯಮ ವಯಸ್ಕ ಬೈಕ್ ಸವಾರನನ್ನ ನಡುರಸ್ತೆಯಲ್ಲಿ ನಿಲ್ಲಿಸುತ್ತಾನೆ. ಹೆಲ್ಮೆಟ್ ಧರಿಸದ ಬಗ್ಗೆ ಪ್ರಶ್ನಿಸುತ್ತಾನೆ. ಕೆಲ ಸಮಯದ ಬಳಿಕ ಬೈಕ್ ಸವಾರ ಜೇಬಿನಿಂದ ಹಣ ತೆಗೆದು ಪೊಲೀಸ್ ಕೈಗಿಡುತ್ತಾನೆ.. ಬಳಿಕ ಅತ್ತಿತ್ತ ಗಮನಿಸಿದ ಪೊಲೀಸ್ ಅಧಿಕಾರಿ ಲಂಚದ ಹಣವನ್ನ ಜೇಬಿಗಿಳಿಸುತ್ತಾನೆ
ಪೊಲೀಸಪ್ಪನ ಈ ಲಂಚಾವತಾರದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 5 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದರು. ಮಾರ್ಚ್ 17ರ ಸಂಜೆ ಹಿಮಾಯತ್ ನಗರದಲ್ಲಿ ನಡೆದ ಪೊಲೀಸಪ್ಪನ ಲಂಚಾವತಾರದ ಪುರಾಣ ಇದಾಗಿತ್ತು.