Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಎರಡೆಲೆ ಚಿಹ್ನೆ ಲಂಚ ಪ್ರಕರಣ: ಟಿಟಿವಿ ದಿನಕರನ್ ವಿರುದ್ಧ ಚಾರ್ಜ್‌ಶೀಟ್ ದಾಖಲು

ಎರಡೆಲೆ ಚಿಹ್ನೆ ಲಂಚ ಪ್ರಕರಣ: ಟಿಟಿವಿ ದಿನಕರನ್ ವಿರುದ್ಧ ಚಾರ್ಜ್‌ಶೀಟ್ ದಾಖಲು
ನವದೆಹಲಿ , ಶುಕ್ರವಾರ, 14 ಜುಲೈ 2017 (18:58 IST)
ಕೇಂದ್ರ ಚುನಾವಣೆ ಆಯೋಗದೊಂದಿಗೆ ಎರಡೆಲೆ ಚಿಹ್ನೆ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐಎಡಿಎಂಕೆ (ಅಮ್ಮ) ಬಣದ ನಾಯಕ ಟಿಟಿವಿ ದಿನಕರನ್ ಭಾಗಿಯಾಗಿರುವ ಪ್ರಕರಣದಲ್ಲಿ, ಮಧ್ಯವರ್ತಿಯಾಗಿರುವ ಆರೋಪಿಯ ವಿರುದ್ಧ ದೆಹಲಿ ಪೊಲೀಸರು ವಿಶೇಷ ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್ ದಾಖಲಿಸಿದ್ದಾರೆ.
 
ಚಾರ್ಜ್‌ಶೀಟ್ ಸಲ್ಲಿಸಿದ ಅಂತಿಮ ವರದಿಯಲ್ಲಿ ದಿನಕರನ್ ಹೆಸರನ್ನು ಸೇರ್ಪಡೆಗೊಳಿಸಿಲ್ಲ.ತನಿಖೆ ಮುಕ್ತಾಯದ ನಂತರ ಪೂರಕ ಚಾರ್ಜ್‌ಶೀಟ್‌ನಲ್ಲಿ ದಿನಕರನ್ ಮತ್ತು ಇತರ ಆರೋಪಿಗಳ ಹೆಸರುಗಳನ್ನು ಸೇರ್ಪಡೆಗೊಳಿಸಲಾಗುವುದು ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ.
 
ಏಪ್ರಿಲ್ 16 ರಂದು ಬಂಧಿಸಲಾಗಿದ್ದ ಸುಕೇಶ್ ಚಂದ್ರಶೇಖರ್ ವಿರುದ್ಧ ಸೆಷನ್ಸ್ ನ್ಯಾಯಾಲಯದಿಂದ ಎರಡು ಬಾರಿ ಜಾಮೀನು ನಿರಾಕರಿಸಲಾಗಿದೆ ಮತ್ತು ದೆಹಲಿ ಹೈಕೋರ್ಟ್ ಕೂಡಾ ಜಾಮೀನು ನಿರಾಕರಿಸಿದೆ. ಜುಲೈ 17 ರಂದು ಸಂಬಂಧಪಟ್ಟ ನ್ಯಾಯಾಧೀಶರ ಮುಂದೆ ವಿಶೇಷ ನ್ಯಾಯಾಧೀಶ ಮನೋಜ್ ಜೈನ್ ಈ ವಿಷಯವನ್ನು ದಾಖಲಿಸಿದ್ದಾರೆ.
 
ವಂಚನೆ, ಮೋಸದ ಉದ್ದೇಶ, ಖೋಟಾ ಭದ್ರತಾ ಪತ್ರಗಳು, ವಂಚನೆಗಾಗಿ ನಕಲಿ ದಾಖಲೆಗಳನ್ನು ಬಳಸಿರುವ ಉದ್ದೇಶ ಕಾನೂನಿನಡಿ ಐಪಿಸಿ ಅಡಿಯಲ್ಲಿ ಆರೋಪ ಪಟ್ಟಿ ದಾಖಲಿಸಲಾಗಿದೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
 
ಒಂದು ವೇಳೆ, ಆರೋಪಿಗಳು ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾದಲ್ಲಿ ಗರಿಷ್ಠ ಜೀವಾವಧಿ ಶಿಕ್ಷೆಯನ್ನು ವಿಧಿಸಬಹುದಾಗಿದೆ.
 
ಶಶಿಕಲಾ ಬಣಕ್ಕೆ ಎಐಎಡಿಎಂಕೆ ಪಕ್ಷದ ಎರಡು ಎಲೆಗಳ ಚಿಹ್ನೆಯನ್ನು ಪಡೆಯಲು ಚುನಾವಣಾ ಆಯೋಗದ ಅಧಿಕಾರಿಗಳಿಗೆ ಲಂಚ ನೀಡಲು ದಿನಕರನ್ ನಿಂದ ಹಣವನ್ನು ತೆಗೆದುಕೊಂಡಿದ್ದಕ್ಕಾಗಿ ಶ್ರೀ ಚಂದ್ರಶೇಖರ್ ಅವರನ್ನು ಬಂಧಿಸಲಾಯಿತು.
 
ದೆಹಲಿ ಪೊಲೀಸರ ಕ್ರೈಂ ಬ್ರಾಂಚ್ ಪ್ರಕಾರ, ಆರೋಪಿ ಸುಕೇಶ್ ಚಂದ್ರಶೇಖರ್ ರಾಜ್ಯಸಭೆಯ ಸದಸ್ಯರಿಗೆ ನೀಡಲಾಗುವ ನಕಲಿ ಗುರುತಿನ ಪತ್ರವನ್ನು ಕೂಡಾ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಜಿಯೋ ಸಂಸ್ಥೆಯಿಂದ ಕನಸಿನಲ್ಲೂ ಊಹಿಸದ ಭರ್ಜರಿ ಗಿಫ್ಟ್