ನೋಟು ನಿಷೇಧ ಜಾರಿಗೊಳಿಸಿದ 50 ದಿನಗಳ ನಂತರ ಹಣಕಾಸಿನ ಬಿಕ್ಕಟ್ಟು ಇತ್ಯರ್ಥವಾಗದಿದ್ದಲ್ಲಿ ದೇಶದ ಜನತೆ ಶಿಕ್ಷಿಸಬಹುದು ಎಂದು ಹೇಳಿಕೆ ನೀಡಿದ ಪ್ರಧಾನಿ ಮೋದಿ, ಶಿಕ್ಷೆಗೆ ಸಿದ್ದರಾಗಲು ಯಾವುದಾದರೊಂದು ವೃತ್ತವನ್ನು ಹುಡುಕಿದಲ್ಲಿ ಜನತೆ ಶಿಕ್ಷಿಸಲು ಸಿದ್ದರಾಗುತ್ತಾರೆ ಎಂದು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.
ಕಪ್ಪು ಹಣದ ವಿರುದ್ಧದ ಹೋರಾಟಕ್ಕಾಗಿ ನೋಟು ನಿಷೇಧ ಜಾರಿಗೊಳಿಸಿ ದೇಶದ ಆರ್ಥಿಕ ಸ್ಥಿತಿಯನ್ನು ಹದಗೆಡಿಸಿದ್ದಲ್ಲದೇ ಜನಸಾಮಾನ್ಯರಿಗೆ ಸಂಕಷ್ಟ ತಂದಿದ್ದಕ್ಕಾಗಿ, ಜನರು ಶಿಕ್ಷಿಸಲು ಪ್ರಧಾನಿ ಮೋದಿ ತಮಗೆ ಇಷ್ಟವಾದ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಗೋವಾದಲ್ಲಿ ಪ್ರಧಾನಿ ಮೋದಿ ಕಪ್ಪು ಹಣದ ವಿರುದ್ಧದ ಹೋರಾಟಕ್ಕಾಗಿ 1000 ಮತ್ತು 500 ರೂ. ನೋಟು ನಿಷೇಧ ಹೇರಲಾಗಿದ್ದು, ನನಗೆ 50 ದಿನಗಳ ಕಾಲವಕಾಶ ಕೊಡಿ ಎಂದು ಜನತೆಯನ್ನು ಕೋರಿದ್ದರು.
ನೋಟು ನಿಷೇಧದ ನಂತರ ನಗದು ರಹಿತ ಆರ್ಥಿಕತೆಯ ಬಗ್ಗೆ ಹೇಳುತ್ತಿರುವ ಹೇಳಿಕೆಗಳನ್ನು ನೋಡಿದಲ್ಲಿ ಕೋತಿಯಾಟದಂತೆ ಕಾಣುತ್ತದೆ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ಮೋದಿಯ ಸಾರ್ವಜನಿಕ ಸಭೆಗಳಲ್ಲಿ ಕೆಲ ಆರೆಸ್ಸೆಸ್ ಕಾರ್ಯಕರ್ತರು ಮುಂದಿನ ಸೀಟುಗಳಲ್ಲಿ ಆಸೀನರಾಗಿ ಮೋದಿ ಮೋದಿ ಎಂದು ಕೂಗುತ್ತಿರುತ್ತಾರೆ. ಆದರೆ, ಮೋದಿ ಅದನ್ನು ಸಾರ್ವಜನಿಕರು ನನ್ನನ್ನು ಹೊಗಳುತ್ತಿದ್ದಾರೆ ಎಂದು ಹೇಳುತ್ತಾ ತಿರುಗುತ್ತಿದ್ದಾರೆ ಎಂದು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ವ್ಯಂಗ್ಯವಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.