ದೇಶದ ಪ್ರಗತಿ ಸ್ವಚ್ಛ ತೆರಿಗೆ ಪದ್ಧತಿ ಮೇಲೆ ನಿಂತಿದೆ. ಜನರ ವ್ಯವಹಾರದ ಪಾರ್ದರ್ಶಕತೆ ಳುವ ಹೊಣೆ ಚಾರ್ಟರ್ಡ್ ಅಕೌಂಟೆಂಟ್`ಗಳ ಮೇಲಿದೆ ಎಂದು ಪ್ರಧಾನಮಂತ್ರಿ ನರೇಂದ್ರಮೋದಿ ಹೇಳಿದ್ದಾರೆ.
ನವದೆಹಲಿಯ ಇಂದಿರಾಗಾಂಧಿ ಸ್ಟೇಡಿಯಂನಲ್ಲಿ ಇನ್ಸ್`ಟಿಟ್ಯೂಟ್ ಆಫ್ ಚಾರ್ಟ್ರರ್ಡ್ ಅಕೌಂಟೆಂಟ್ ಆಫ್ ಇಂಡಿಯಾ ಸಂಸ್ಥೆಯ ಫೌಂಡೇಶನ್ ಡೇ ಕಾರ್ಯಕ್ರಮದಲ್ಲಿ ಚಾರ್ಟರ್ಡ್ ಅಕೌಂಟೆಂಟ್`ಗಳನ್ನ ಉದ್ದೇಶಿಸಿ ಮಾತನಾಡಿದ ನರೇಂದ್ರಮೋದಿ, ದೇಶದಲ್ಲಿ ಕಪ್ಪುಹಣ ತೊಡೆದುಹಾಕಲು ಜಿಎಸ್`ಟಿ ಸಹಕಾರಿಯಾಗಲಿದೆ ಎಂದರು.
ಇದೇವೇಳೆ, ಜನರ ಆದಾಯದ ಆಡಿಟ್ ಮಾಡುವ ವೇಳೆ ಪಾರದರ್ಶಕತೆ ಕಾಯ್ದುಕೊಳ್ಳುವಲ್ಲಿ ಚಾರ್ಟರ್ಡ್ ಅಕೌಂಟೆಟ್`ಗಳ ಪಾತ್ರ ಮಹತ್ವದ್ದಾಗಿದೆ. ಸ್ವಚ್ಛ ತೆರಿಗೆ ವ್ಯವಸ್ಥೆ ಮೇಲೆ ದೇಶದ ಅಭಿವೃದ್ಧಿ ನಿಂತಿದೆ ಎಂದರು.
.
ಚಾರ್ಟರ್ಡ್ ಅಕೌಂಟೆಂಟ್`ಗಳು ಭಾರತದ ಅರ್ಥವ್ಯವಸ್ಥೆಯ ಪಿಲ್ಲರ್`ಗಳು. ಭಾರತದ ಸಿಎಗಳಿಗೆ ವಿಶ್ವಾದ್ಯಂತ ಒಳ್ಖೆಯ ಹೆಸರಿದೆ.ಸಿಎಗಳು ಸಮಾಜದ ಆರ್ಥಿಕ ಆರೋಗ್ಯವನ್ನ ನೋಡಿಕೊಳ್ಳುತ್ತಾರೆ.ದೇಶದ ಸಮಾಜದ ಆರ್ಥಿಕ ಆರೋಗ್ಯ ಹದಗೆಡದಂತೆ ನೋಡಿಕೊಳ್ಳುವ ಜವಾಬ್ದಾರಿ ಸಿಎಗಳ ಮೇಲಿದೆ. ನೋಟ್ ಬ್ಯಾನ್ ದೇಶದ ಇತಿಹಾಸದಲ್ಲಿ ಬಹುದೊಡ್ಡ ಹೆಜ್ಜೆ. ನೋಟ್ ಬ್ಯಾನ್ ಬಳಿಕ 3 ಲಕ್ಷ ಕಂಪನಿಗಳ ದಾಖಲೆ ಪರಿಶೀಲನೆ ನಡೆಯುತ್ತಿದೆ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ