ಜಮ್ಮು ಕಾಶ್ಮೀರ: ಪ್ರತೀ ಬಾರಿಯಂತೆ ಈ ಬಾರಿಯೂ ಪ್ರಧಾನಿ ನರೇಂದ್ರ ಮೋದಿ ಬಿಎಸ್ಎಫ್ ಯೋಧರ ಜತೆ ದೀಪಾವಳಿ ಆಚರಿಸಿದ್ದಾರೆ.
ಜಮ್ಮು ಕಾಶ್ಮೀರದ ಗುರೇಜ್ ಸೆಕ್ಟರ್ ಗೆ ತೆರಳಿದ ಪ್ರಧಾನಿ ಮೋದಿ, ಸೇನಾ ಸಮವಸ್ತ್ರ ಧರಿಸಿ ದೀಪಾವಳಿ ಆಚರಿಸಿದರು. ಇದೇವೇಳೆ ಯೋಧರಿಗೆ ಸಿಹಿ ತಿನ್ನಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಯೋಧರು ನಮ್ಮ ಕುಟುಂಬದ ಸದಸ್ಯರಿದ್ದಂತೆ. ಕುಟುಂಬದ ಜತೆ ದೀಪಾವಳಿ ಆಚರಿಸಿದ ಸಂತಸವಾಗಿದೆ. ಸೇನಾ ಯೋಧರೇ ನನಗೆ ಸ್ಫೂರ್ತಿ. ನಿಮ್ಮ ಜತೆ ಸಮಯ ಕಳೆದಾಗಲೆಲ್ಲಾ ಹೊಸ ಶಕ್ತಿ ಬರುತ್ತದೆ. ಸೇನಾ ಯೋಧರ ಹಿತ ಕಾಯಲು ಕೇಂದ್ರ ಸರ್ಕಾರ ಎಂದಿಗೂ ಬದ್ಧ ಎಂದು ತಿಳಿಸಿದರು.