ಪ್ರಧಾನಿ ಮೋದಿ ಇಂದು ಬ್ರಿಕ್ಸ್ ಸಮಾವೇಶಕ್ಕೆ ವಿಧ್ಯುಕ್ತ ಚಾಲನೆ ನೀಡಿದ್ದು, ಪಾಕಿಸ್ತಾನ ಉಗ್ರವಾದದ ತಾಯಿ ಸ್ವರೂಪವನ್ನು ಪಡೆದುಕೊಂಡಿದೆ, ಬ್ರಿಕ್ಸ್ ರಾಷ್ಟ್ರಗಳು ಒಗ್ಗೂಡಿ ಭಯೋತ್ಪಾದನೆ ವಿರುದ್ಧ ಹೋರಾಡಬೇಕಿದೆ ಎಂದಿದ್ದಾರೆ.
ನಿರೀಕ್ಷೆಯಂತೆ ಭಯೋತ್ಪಾದನೆ ವಿಷಯವನ್ನು ಮುಂದಿಟ್ಟುಕೊಂಡು ಸ್ವಾಗತ ಭಾಷಣ ಮಾಡಿದ ಪ್ರಧಾನಿ ಮೋದಿ ನಾವೆಲ್ಲರೂ ಒಕ್ಕೊರಲಿನಿಂದ ಉಗ್ರವಾದದ ಬಗ್ಗೆ ಧ್ವನಿ ಎತ್ತಬೇಕು. ಪಾಕಿಸ್ತಾನ ಉಗ್ರವಾದದ ತಾಯಿಯ ಸ್ವರೂಪವನ್ನು ಪಡೆದುಕೊಂಡಿದೆ
ರಾಜಕೀಯ ಲಾಭಕ್ಕಾಗಿ ಉಗ್ರವಾದವನ್ನು ಪೋಷಿಸುತ್ತಿದೆ. ಇದರ ಪರಿಣಾಮವಾಗಿ ಸಾಮಾನ್ಯ ಪ್ರಜೆಗಳು ಸಾಕಷ್ಟು ತೊಂದರೆಯಲ್ಲಿ ಸಿಲುಕಿದ್ದಾರೆ. ಇತರ ರಾಷ್ಟ್ರಗಳ ಮೇಲೂ ಪಾಕ್ ಪ್ರಚೋದಿತ ಉಗ್ರವಾದ ಪರಿಣಾಮ ಬೀರುತ್ತಿದೆ. ಬ್ರಿಕ್ಸ್ ಮತ್ತು ಬ್ರಿಮ್ಸ್‌ಟೆಕ್‌ನ ಎಲ್ಲ ರಾಷ್ಟ್ರಗಳು ಒಂದೇ ಸ್ವರದಲ್ಲಿ ಮಾತನಾಡಬೇಕಾಗುತ್ತದೆ ಎನ್ನುವುದರ ಮೂಲಕ ಪಾಕ್‌ನ್ನು ಮೂಲೆಗುಂಪು ಮಾಡಲು ಸರ್ವ ಪ್ರಯತ್ನಗಳನ್ನು ನಡೆಸಿದ್ದಾರೆ.
ಭಯೋತ್ಪಾದನೆ ಮತ್ತು ಅದರ ಬೆಂಬಲಿಗರನ್ನು ಎಲ್ಲರೂ ವಿರೋಧಿಸಬೇಕು. ಭಯೋತ್ಪಾದನೆ ಸಮರ್ಥನೆ ಅವರ ದೃಷ್ಟಿಕೋನವನ್ನು ತೋರಿಸುತ್ತದೆ. ಇದನ್ನು ಭಾರತ ಖಂಡಿಸುತ್ತದೆ. ಉಗ್ರವಾದ ನಮ್ಮ ಆರ್ಥಿಕತೆ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ. ನಮ್ಮ ನೆರೆಯ ರಾಷ್ಟ್ರ ಉಗ್ರವಾದದ ಮಾತೃಸ್ವರೂಪವನ್ನು ಪಡೆದುಕೊಂಡಿರುವುದು ದುರದೃಷ್ಟಕರ ಎಂದು ಮೋದಿ ವಿಷಾದ ವ್ಯಕ್ತ ಪಡಿಸಿದ್ದಾರೆ.
ನಿನ್ನೆ ರಷ್ಯಾ ಜಕೆ 16 ಒಪ್ಪಂದಗಳಿಗೆ ಸಹಿ ಹಾಕಿದ್ದ ಮೋದಿ ಭಯೋತ್ಪಾದನೆ ವಿರುದ್ಧ ರಷ್ಯಾದ ಬೆಂಬಲ ಪಡೆಯುವಲ್ಲಿ ಸಫಲರಾಗಿದ್ದರು, ಹೊಸ ಸ್ನೇಹಿತರು ಬಂದರೂ ಹಳೆಯ ಸ್ನೇಹಿತರಿಗೆ ಹೆಚ್ಚು ಮಹತ್ವ ಎನ್ನುವುದರ ಮೂಲಕ ರಾಜತಾಂತ್ರಿಕ ಜಾಣ್ಮೆಯನ್ನು ಮೆರೆದಿದ್ದ ಮೋದಿ ಇದೇ ಜಾಣ್ಮೆಯಿಂದ ಚೀನಾದ ವಿಶ್ವಾಸವನ್ನುಗಳಿಸಿ ಪಾಕ್ ವಿರುದ್ಧ ಅದನ್ನು ಎತ್ತಿ ಕಟ್ಟುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.
ಸದಾ ಪಾಕಿಸ್ತಾನವನ್ನು ಬೆಂಬಲಿಸುವ ಚೀನಾವನ್ನು ಒಲಿಸಿಕೊಂಡಿದ್ದೇ ಆದರೆ ಅದು ಮೋದಿ ಅವರು ಸಾಧಿಸಿದ ದೊಡ್ಡ ಮಟ್ಟದ ರಾಜತಾಂತ್ರಿಕ ಗೆಲುವೆನಿಸಿಕೊಳ್ಳಲಿದೆ. ಚೀನಾ ದೇಶ ಕೂಡ ಪಾಕ್ ಪ್ರಚೋದಿತ ಉಗ್ರವಾದದ ಬಗ್ಗೆ ಗಟ್ಟಿ ಧ್ವನಿಯಲ್ಲಿ ಮಾತನ್ನಾಡಿದರೆ ಪಾಕಿಸ್ತಾನಕ್ಕೆ ಅತಿ ದೊಡ್ಡ ಛೀಮಾರಿಯಾಗುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ