Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಭಯೋತ್ಪಾದಕರನ್ನು ಮನೆಗೆ ನುಗ್ಗಿ ಹೊಡೆಯಲಾಗುತ್ತಿದೆ: ಪ್ರಧಾನಿ ನರೇಂದ್ರ ಮೋದಿ

Narendra Modi

Krishnaveni K

ರಿಷಿಕೇಶ , ಗುರುವಾರ, 11 ಏಪ್ರಿಲ್ 2024 (17:10 IST)
ರಿಷಿಕೇಶ: ದೇಶದಲ್ಲಿ ಈಗ ಇರುವುದು ಸ್ಥಿರ ಸರ್ಕಾರ. ಹೀಗಾಗಿ ಭಯೋತ್ಪಾದಕರನ್ನು ಮನೆಗೇ ನುಗ್ಗಿ ಹೊಡೆದು ಕೊಲ್ಲಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಉತ್ತರಾಖಂಡದ ರಿಷಿಕೇಶದಲ್ಲಿ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಅವರು ಭಯೋತ್ಪಾದಕರಿಗೆ ನಮ್ಮ ಸರ್ಕಾರ ತಕ್ಕ ಪಾಠ ಕಲಿಸಿದೆ ಎಂದಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಪಡಿಸಲಾಗಿದೆ. ತ್ರಿವಳಿ ತಲಾಖ್ ಕಾನೂನಿಗೆ ತಿದ್ದುಪಡಿ ತರಲಾಗಿದೆ ಎಂದಿದ್ದಾರೆ.

ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ನೀಡಲಾಗಿದೆ. ಬಡವರಿಗೂ ಶೇ.100 ರಷ್ಟು ಮೀಸಲಾತಿ ಸಿಕ್ಕಿದೆ. ಕಳೆದ 10 ವರ್ಷಗಳಲ್ಲಿ ಭಾರತ ಹಿಂದೆಂದಿಗಿಂತಲೂ ಹೆಚ್ಚು ಬಲಿಷ್ಠವಾಗಿದೆ. ದೇಶದಲ್ಲಿ ಅಸ್ಥಿರ ಮತ್ತು ದುರ್ಬಲ ಸರ್ಕಾರವಿದ್ದಾಗ ಶತ್ರುಗಳು ಲಾಭ ಪಡೆದುಕೊಂಡಿದ್ದಾರೆ. ಆದರೆ ಈಗ ಬಲಿಷ್ಠ ಸರ್ಕಾರವಿದ್ದು, ಭಯೋತ್ಪಾದಕರನ್ನು ಮನೆಗೇ ನುಗ್ಗಿ ಕೊಲ್ಲಲಾಗುತ್ತಿದೆ ಎಂದಿದ್ದಾರೆ.

ಕಾಂಗ್ರೆಸ್ ಅವಧಿಯಲ್ಲಿ ಸೈನಿಕರಿಗೆ ಎದುರಾಳಿಗಳಿಂದ ರಕ್ಷಣೆ ಪಡೆಯಲು ಬುಲೆಟ್ ಪ್ರೂಫ್ ಜಾಕೆಟ್ ಕೂಡಾ ಇರಲಿಲ್ಲ. ಆದರೆ ಈಗ ಭಾರತದಲ್ಲೇ ತಯಾರಿಸಲಾದ ಬುಲೆಟ್ ಪ್ರೂಫ್ ಜಾಕೆಟ್ ಗಳನ್ನು ಸೈನಿಕರಿಗೆ ನೀಡಿ ಅವರ ಪ್ರಾಣ ರಕ್ಷಣೆ ಮಾಡಿದ್ದು ಬಿಜೆಪಿ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಟಿ ರವಿಗೆ ಅನ್ಯಾಯವಾಗಿದೆ, ವಿಧಾನಸಭೆಯಲ್ಲಿ ಗುಡುಗಬೇಕಿದ್ದವರು ಹೊರಗಿದ್ದಾರೆ : ಬಿಎಸ್‌ವೈ