ಉರಿ ಸೇನಾ ನೆಲೆ ಮೇಲಿನ ಉಗ್ರ ದಾಳಿಯಿಂದ ಆಕ್ರೋಶಗೊಂಡಿರುವ ಭಾರತ ನವೆಂಬರ್ ತಿಂಗಳಲ್ಲಿ ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಸಾರ್ಕ್ ಸಮ್ಮೇಳನವನ್ನು ಬಹಿಷ್ಕರಿಸಿದೆ.ವಿದೇಶಾಂಗ ಸಚಿವಾಲಯ ಇದನ್ನು ಖಚಿತ ಪಡಿಸಿದೆ.
ಇತ್ತ ಭಾರತ ಸಭೆಯಿಂದ ಹಿಂದೆ ಸರಿಯುತ್ತಿದ್ದಂತೆ ಇತರ ರಾಷ್ಟ್ರಗಳು ಸಹ ಭಾರತವನ್ನು ಅನುಸರಿಸಲು ಮುಂದಾಗಿದ್ದು ಪಾಕಿಸ್ತಾನಕ್ಕೆ ಶಾಕ್ ನೀಡಲು ಸಿದ್ಧವಾಗಿವೆ.
ಭಾರತ ಸಾರ್ಕ್ ಸಭೆಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದ ಮೇಲೆ ಇತರ ದೇಶಗಳು ಭಾಗವಹಿಸುವುದರಲ್ಲಿ ಅರ್ಥವಿಲ್ಲ, ತಾನು ಕೂಡ ಸಭೆಯಿಂದ ಹಿಂದೆ ಸರಿಯುವುದಾಗಿ ಶ್ರೀಲಂಕಾ ಈಗಾಗಲೇ ತನ್ನ ನಿರ್ಧಾರವನ್ನು ಹೊರ ಹಾಕಿದೆ.
ಅಪಘಾನಿಸ್ತಾನ್, ಬಾಂಗ್ಲಾದೇಶ್ ಮತ್ತು ಭೂತಾನ್ ದೇಶಗಳು ಕೂಡ ಶೃಂಗ ಸಭೆಯಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿವೆ ಎಂದು ತಿಳಿದು ಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.