ತಮ್ಮ ದಿನಚರಿಯಾದ ಯೋಗವನ್ನು ಬಿಟ್ಟು ಇಂದು ಮುಂಜಾನೆ ಪ್ರಧಾನಿ ಮೋದಿ ತಾಯಿ ಹೀರಾಬೆನ್ ಅವರನ್ನು ಕಾಣಲು ದೌಡಾಯಿಸಿದ್ದಾರೆ. ಟ್ವಿಟರ್ ಮೂಲಕ ಪ್ರಧಾನಿ ಮೋದಿ ಅವರೇ ಈ ಮಾಹಿತಿಯನ್ನು ಹೊರಹಾಕಿದ್ದಾರೆ.
ಯೋಗಾಭ್ಯಾಸವನ್ನು ಬಿಟ್ಟು ತಾಯಿಯನ್ನು ನೋಡಲು ಹೋಗಿದ್ದೆ. ಇಂದಿನ ಉಪಹಾರವನ್ನು ಅವರೊಡನೆ ಸೇವಿಸಿದೆ. ಅವರೊಂದಿಗೆ ಕಳೆದ ಸಮಯ ಅದ್ಭುತವಾಗಿತ್ತು, ಎಂದು ಪ್ರಧಾನಿ ಟ್ವಿಟರ್‌ನಲ್ಲಿ ತಮ್ಮ ಸಂತಷದ ಗಳಿಗೆಯನ್ನು ಮೆಲುಕು ಹಾಕಿದ್ದಾರೆ.
97ರ ಹರೆಯದ ಮೋದಿ ಅವರ ತಾಯಿ, ತಮ್ಮ ಕಿರಿಯ ಪುತ್ರ ಪಂಕಜ್ ಮೋದಿ ಅವರ ಜತೆ ಗಾಂಧಿನಗರದ ಹೊರವಲಯದಲ್ಲಿ ವಾಸಿಸುತ್ತಾರೆ.
ಸೋಮವಾರ ಗುಜರಾತ್‌ಗೆ ಆಗಮಿಸಿರುವ ಪ್ರಧಾನಿ ಇಂದು "ವೈಬ್ರೆಂಟ್ ಗುಜರಾತ್" 8ನೇ ಜಾಗತಿಕ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.
ಹೀರಾಬಾ ಎಂದು ಕರೆಸಿಕೊಳ್ಳುವ 95 ವರ್ಷದ ಹೀರಾಬೆನ್ ಅವರು ಗಾಂಧಿನಗರದಲ್ಲಿ ತಮ್ಮ ಕಿರಿಯ ಮಗ ಪಂಕಜ್ ಮೋದಿ ಜೊತೆ ವಾಸವಿದ್ದಾರೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಕೂಡ ಪ್ರಧಾನಿ ತಾಯಿಯನ್ನು ಭೇಟಿಯಾಗಿದ್ದರು. ತಮ್ಮ 66 ನೇ ಜನ್ಮದಿನದಂದು( ಸೆಪ್ಟೆಂಬರ್ 17) ರಂದು ಸಹ ಮೋದಿ ತಾಯಿ ಜತೆ ಸಮಯ ಕಳೆದಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ