ಚಳಿಗಾಲದ ಅಧಿವೇಶನದ ಕೊನೆಯ ದಿನವಾದ ಶುಕ್ರವಾರ, ನೋಟು ನಿಷೇಧ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಪ್ರಧಾನಿ ಮೋದಿ, ನಾವು ಮಾಡಿದ ಕೆಲಸವನ್ನು ಇಂದಿರಾ ಗಾಂಧಿ ಸರ್ಕಾರ 1971ರಲ್ಲಿ ಮಾಡಿದ್ದರೆ ದೇಶ ಇಂದು ಎಲ್ಲೋ ಇರುತ್ತಿತ್ತು ಎಂದು ಹೇಳಿದ್ದಾರೆ.
ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಾತನಾಡುತ್ತಿದ್ದ ಮೋದಿ, 1971ರಲ್ಲಿ ನೋಟು ನಿಷೇಧ ಮಾಡದಿದ್ದುದರಿಂದ ನಾವು ಬಹು ದೊಡ್ಡ ಮಟ್ಟದಲ್ಲಿ ನಷ್ಟವನ್ನು ಎದುರಿಸಬೇಕಾಗಿದೆ ಎಂದಿದ್ದಾರೆ.
ತಮ್ಮ ಈ ನಡೆಯನ್ನು ಬೆಂಬಲಿಸದ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಅವರು, ದೇಶದಿಂದ ಕಪ್ಪು ಹಣವನ್ನು ನಾಮಾವಶೇಷ ಮಾಡುತ್ತೇವೆ ಎಂದರು.
ಮಾಜಿ ಅಧಿಕಾರಿ ಮಾಧವ್ ಗೊಡಬೆಲೆಯವರ ಪುಸ್ತಕವನ್ನು ಉಲ್ಲೇಖಿಸಿ ಹೇಳಿದ ಅವರು, ಸಚಿವರು ಮತ್ತು ಅಧಿಕಾರಿಗಳು ನೋಟು ನಿಷೇಧಕ್ಕೆ ಶಿಫಾರಸ್ಸು ಮಾಡಿದ್ದರು. ಆದರೆ ಇಂದಿರಾ ಅದಕ್ಕೊಪ್ಪಲಿಲ್ಲ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ