ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನಿನ್ನೆ 67 ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಹಲವರು ಅವರಿಗೆ ಶುಭ ಹಾರೈಸಿದ್ದಾರೆ. ಆದರೆ ಆಂಧ್ರಪ್ರದೇಶದ ರೈತರ ಗುಂಪೊಂದು 68 ಪೈಸೆ ಚೆಕ್ ನ್ನು ಉಡುಗೊರೆಯಾಗಿ ಕಳುಹಿಸಿದೆ.
ರಾಯಲ್ ಸೀಮಾ ಪ್ರದೇಶದ ಬರಪೀಡಿತ ರೈತರು ತಮ್ಮ ಸಮಸ್ಯೆಯನ್ನು ಪ್ರಧಾನಿಗೆ ಮನವರಿಕೆ ಮಾಡಿಕೊಡಲು ಈ ರೀತಿ ಮಾಡಿದ್ದಾರೆ. ರಾಯಲ್ ಸೀಮಾ ಸಾಗುನೀತಿ ಸಾಧನಾ ಸಮಿತಿ ಎಂಬ ರೈತರ ಸಂಘ ತಮ್ಮ ಪ್ರದೇಶದ ಬರ ಸಮಸ್ಯೆಯನ್ನು ತಿಳಿಸಲು 68 ಪೈಸೆಯ ಸುಮಾರು 400 ಚೆಕ್ ಗಳನ್ನು ರವಾನಿಸಿದೆ.
ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ವಿಪಕ್ಷ ನಾಯಕ ಜಗಮೋಹನ್ ರೆಡ್ಡಿ ಇದೇ ಪ್ರದೇಶದವರು. ಹಾಗಿದ್ದರೂ ಅವರು ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಹಾಗಾಗಿ ಈ ಚೆಕ್ ಕಳುಹಿಸುವ ಮೂಲಕ ಪ್ರಧಾನಿಗೆ ನಮ್ಮ ಸಮಸ್ಯೆ ಮುಟ್ಟಲಿ ಎಂಬುದು ಈ ರೈತರ ಆಶಯವಂತೆ.