ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರ ವೈಯಕ್ತಿಕ ಟ್ವೀಟರ್ ಖಾತೆಯನ್ನು ದುಷ್ಕರ್ಮಿಗಳು ಹ್ಯಾಕ್ ಮಾಡಿರುವುದಾಗಿ ತಿಳಿದುಬಂದಿದೆ.
ಈ ಬಗ್ಗೆ ಟ್ವೀಟರ್ ಸಂಸ್ಥೆ ಬುಧವಾರದಂದು ದೃಢಪಡಿಸಿದೆ. ಅಲ್ಲದೇ ಈ ಖಾತೆಯನ್ನು ಸುರಕ್ಷಿತಗೊಳಿಸಲು ಕ್ರಮ ಕೈಗೊಳ್ಳುತ್ತಿರುವುದಾಗಿ ತಿಳಿಸಿದೆ. ಪ್ರಧಾನಿ ಮೋದಿಯವರ ಹ್ಯಾಕ್ ಆಗಿರುವ ಖಾತೆಯಲ್ಲಿ 25 ಲಕ್ಷ ಫಾಲೋವರ್ಸ್ ಇದ್ದಾರೆ. ಇದರಲ್ಲಿ ಹೆಚ್ಚಾಗಿ ಹಿಂದಿ ಬಾಷೆಯಲ್ಲಿ ಟ್ವೀಟ್ ಮಾಡುತ್ತಾರೆ ಎಂಬುದಾಗಿ ತಿಳಿದುಬಂದಿದೆ.
ಈ ಹಿಂದೆ ವಿಶ್ವದ ಹಲವು ಗಣ್ಯರ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಅಮೇರಿಕಾದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್, ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಇಲಾನ್ ಮಸ್ಕ್ ಮೊದಲಾದವರ ಟ್ವೀಟರ್ ಖಾತೆ ಕೂಡ ಹ್ಯಾಕ್ ಆಗಿದ್ದವು ಎನ್ನಲಾಗಿದೆ.