ಹರ್ಯಾಣ: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 400 ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಪ್ರಚಂಡ ಬಹುಮತ ಸಾಧಿಸಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಹರ್ಯಾಣದ ರೇವಾರಿಯಲ್ಲಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಮೋದಿ ಈ ಬಾರಿ ಎನ್ ಡಿಎ 400 ಸ್ಥಾನಗಳನ್ನು ದಾಟಲಿದೆ. ನಮ್ಮ ಸರ್ಕಾರ ಮೂರನೇ ಬಾರಿಗೆ ಅಧಿಕಾರಕ್ಕೇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕತಾರ್ ಮತ್ತು ಯುಎಇ ಭಾರತವನ್ನು ಗೌರವಿಸುತ್ತಿದೆ. ಇದು ಪ್ರಧಾನಿಗೆ ಮಾತ್ರವಲ್ಲ, ಇಡೀ ಭಾರತಕ್ಕೆ ಸಂದ ಗೌರವ ಎಂದಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ಬೇಕಿತ್ತು. ಇದು ಇಂದು ನಿಜವಾಗಿದೆ. ಆದರೆ ಕಾಂಗ್ರೆಸ್ ಗೆ ಇದು ಬೇಡವಾಗಿದೆ. ಅವರು ಎಂದೂ ದೇವಾಲಯ ನಿರ್ಮಾಣವಾಗುವುದನ್ನು ಬಯಸಲಿಲ್ಲ. ಯಾಕೆಂದರೆ ಅವರಿಗೆ ಭಗವಾನ್ ರಾಮ ಕಾಲ್ಪನಿಕವಾಗಿದ್ದನು. ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ಧತಿಗೂ ಕಾಂಗ್ರೆಸ್ ತಡೆಯಾಗಿತ್ತು. ನಾನು ಅದನ್ನು ರದ್ದುಗೊಳಿಸುತ್ತೇನೆ ಎಂದಿದ್ದೆ. ಇಂದು ಅದು ಐತಿಹಾಸಿಕ ನಿರ್ಧಾರವಾಗಿದೆ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷ ಇಂದು ಶೋಚನೀಯ ಸ್ಥಿತಿಗೆ ತಲುಪಿದೆ. ಯಾಕೆಂದರೆ ಕಾಂಗ್ರೆಸ್ ನಲ್ಲಿ ಭ್ರಷ್ಟಾಷಾರ, ಸ್ವಜನಪಕ್ಷಪಾತ ಹೆಚ್ಚಾಗಿದೆ. ಅವರೆಲ್ಲರೂ ಒಂದೇ ನಾಯಕ ಮತ್ತು ಕುಟುಂಬಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಹೀಗಾಗಿ ಒಬ್ಬೊಬ್ಬರಾಗಿ ಕಾಂಗ್ರೆಸ್ ನಾಯಕರು ಪಕ್ಷ ಬಿಡುತ್ತಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ.