ನವದೆಹಲಿ: ಪ್ರಧಾನಿಯಾಗುವುದಾಗಿನಿಂದಲೂ ಸಾಮಾಜಿಕ ಜಾಲತಾಣಗಳ ಬಗ್ಗೆ ವಿಶೇಷ ಒಲವು ಹೊಂದಿದ್ದ ವ್ಯಕ್ತಿ ನರೇಂದ್ರ ಮೋದಿ. ಅವರೀಗ ಜನಪ್ರಿಯ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನಲ್ಲಿ ಅತೀ ಹೆಚ್ಚು ಹಿಂಬಾಲಕರನ್ನು ಹೊಂದಿದ ಖ್ಯಾತಿಗೆ ಪಾತ್ರರಾಗಿದ್ದಾರೆ.
“ವರ್ಲ್ಡ್ ಲೀಡರ್ಸ್ ಆನ್ ಫೇಸ್ ಬುಕ್” ಸಮೀಕ್ಷೆಯಲ್ಲಿ ಜಾಗತಿಕ ನಾಯಕರ ಪೈಕಿ ಅತೀ ಹೆಚ್ಚು ಫಾಲೋವರ್ ಗಳನ್ನು ಹೊಂದಿದ ವ್ಯಕ್ತಿಯಾಗಿ ಪ್ರಧಾನಿ ಮೋದಿ ಹೊರಹೊಮ್ಮಿದ್ದಾರೆ. ಜನಪ್ರಿಯ ಸಂವಹನ ಸಂಸ್ಥೆ ಬುರ್ಸನ್-ಮಾರ್ಸ್ ಟೆಲ್ಲರ್ ಈ ಸಮೀಕ್ಷೆ ನಡೆಸಿತ್ತು.
2016 ರಲ್ಲಿ ಜಗತ್ತಿನ ಯಾವುದೇ ನಾಯಕರಿಗೆ ಹೋಲಿಸಿದರೆ ನಮ್ಮ ಪ್ರಧಾನಿಯವರ ಫೇಸ್ ಬುಕ್ ಪುಟಕ್ಕೆ ಹೆಚ್ಚು ಲೈಕ್ಸ್, ಕಾಮೆಂಟ್ ಗಳು ಬಂದಿವೆ ಎಂದು ತಿಳಿದು ಬಂದಿದೆ. ಫೆಬ್ರವರಿ 1, 2017 ರವರೆಗಿನ ಅಂಕಿ ಅಂಶಗಳನ್ನು ಗಮನಿಸಿದರೆ 168 ಮಿಲಿಯನ್ ಸಂವಹನ ಪ್ರಕ್ರಿಯೆ ನಡೆದಿದೆ. ಕಾಂಬೋಡಿಯಾ ಪ್ರಧಾನಿಗೆ ದ್ವಿತೀಯ ಮತ್ತು ಅಮೆರಿಕಾ ಅಧ್ಯಕ್ಷರಿಗೆ ತೃತೀಯ ಸ್ಥಾನ ಲಭಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ