ದೇಶದಾದ್ಯಂತ ಮಕರ ಸಂಕ್ರಮಣ ಮತ್ತು ಪೊಂಗಲ್, ಮಾಘ ಬಿಹು ಮತ್ತು ಉತ್ತರಾಯಣದ ಹಬ್ಬದ ಸಂಭ್ರಮ ಮನೆಮಾಡಿದ್ದು, ಈ ಶುಭ ಸಂದರ್ಭದಲ್ಲಿ ಪ್ರಧಾನಿ ಮೋದಿ ದೇಶದ ಜನತೆಗೆ ಸರಣಿ ಟ್ವೀಟ್ ಮೂಲಕ ಶುಭಾಶಯಗಳನ್ನು ಕೋರಿದ್ದಾರೆ.
ಇಂದು ದೇಶಾದ್ಯಂತ ವಿವಿಧ ಹಬ್ಬಗಳನ್ನಾಚರಿಸಲಾಗುತ್ತಿದೆ. ಹಬ್ಬದ ಸಂಭ್ರಮದಲ್ಲಿರುವ ಎಲ್ಲರಿಗೂ ನಾನು ಶುಭಾಶಯ ಕೋರುತ್ತೇನೆ ಎಂದು, ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಮಕರ ಸಂಕ್ರಾತಿ ಶುಭಾಶಯಗಳು, ಈ ದಿನ ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರಲಿ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಅವರ ಸರಣಿ ಟ್ವೀಟ್ಗಳು ಹೀಗಿವೆ:
ನನ್ನ ತಮಿಳು ಸ್ನೇಹಿತರಿಗೆ ಸಂತೋಷದ ಮತ್ತು ಸಮೃದ್ಧ ಪೊಂಗಲ್ ಹಾರೈಕೆಗಳು.
ಮಾಘ ಬಿಹು ವಿಶೇಷ ಸಂದರ್ಭದಲ್ಲಿ, ಆಸ್ಸಾಂ ಜನತೆಗೆ ನನ್ನ ಶುಭಾಶಯಗಳು .
ಗುಜರಾತ್ ಜನತೆಗೆ ಉತ್ತರಾಯಣದ ಶುಭಾಶಯಗಳು.
ವಿವಿಧತೆ ದೇಶದ ಬಹುದೊಡ್ಡ ಬಲ ಎಂದಿರುವ ಪ್ರಧಾನಿ ಈ ಹಬ್ಬಗಳು ರೈತರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರಲಿ ಎಂದು ಆಶಿಸಿದ್ದಾರೆ.