ದಿನಬಳಕೆ ವಸ್ತುಗಳು ಪ್ಲಾಸ್ಟಿಕ್`ಮಯವಾಗಿ ಹಲವು ವರ್ಷಗಳೇ ಕಳೆದಿವೆ. ಇದೀಗ, ತಿನ್ನುವ ಅನ್ನವೂ ಪ್ಲಾಸ್ಟಿಕ್ ಆಗಿದೆ. ಉತ್ತರಾಖಂಡ್`ನ ಹಲ್ದ್ವಾನಿಯಲ್ಲಿ ವ್ಯಾಪಾರಿಗಳು ರಾಜಾರೋಶವಾಗಿ ಪ್ಲಾಸ್ಟಿಕ್ ರೈಸ್ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಪಾಲ್ ಎಂಬುವವರು ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಸಿ ಮನೆಗೆ ತಂದು ಅನ್ನ ಮಾಡಿ ತಿಂದಾಗ ರುಚಿ ಬೇರೆಯಾಗಿರುವುದು ಕಂಡುಬಂದಿದೆ. ಬಳಿಕ ಮಕ್ಕಳು ಪ್ಲಾಸ್ಟಿಕ್ ಅಕ್ಕಿಯಲ್ಲಿ ತಯಾರಿಸಿದ ಅನ್ನದಲ್ಲಿ ಬಾಲ್ ತಯಾರಿಸಿ ಕ್ರಿಕೆಟ್ ಆಡುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಪ್ರತ್ಯಕ್ಷವಾದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಕರಣದ ತನಿಖೆಗೆ ಆಹಾರ ಇಲಾಖೆ ಅಧಿಕಾರಿಗಳನ್ನೊಳಗೊಂಡ ತಂಡವನ್ನ ರಚಿಸಲಾಗಿದೆ. ಕೋಲ್ಕತ್ತಾ, ಬೆಂಗಳೂರಿನಲ್ಲಿ ಇತ್ತೀಚೆಗೆ ಪ್ಲಾಸ್ಟಿಕ್ ಮೊಟ್ಟೆ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ, ಪ್ಲಾಸ್ಟಿಕ್ ರೈಸ್ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.