Webdunia - Bharat's app for daily news and videos

Install App

ಪುಸ್ತಕವನ್ನೆತ್ತಿಕೊಳ್ಳಿ, ಕಲ್ಲುಗಳನ್ನಲ್ಲ: ಕಾಶ್ಮೀರ ಯುವಕರಿಗೆ ರಾಜನಾಥ್ ಸಿಂಗ್

Webdunia
ಸೋಮವಾರ, 22 ಆಗಸ್ಟ್ 2016 (17:09 IST)
'ಪುಸ್ತಕವನ್ನೆತ್ತಿಕೊಳ್ಳಿ, ಕಲ್ಲನ್ನಲ್ಲ', ಎಂದು ಕಾಶ್ಮೀರದಲ್ಲಿ ಪ್ರತಿಭಟನೆ ನಡೆಸುತ್ತಿರುವ ಯುವಕರಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮನವಿ ಮಾಡಿಕೊಂಡಿದ್ದಾರೆ. 
 
ಶುಕ್ರವಾರ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ವಿಡಿಯೋ ಒಂದನ್ನು ಪ್ರಕಟಿಸಿರುವ ಸಿಂಗ್, 'ಪ್ರತಿಭಟನೆ, ಹಿಂಸೆಯನ್ನು ಕೈ ಬಿಡಿ, ಪುಸ್ತಕವನ್ನು ಎತ್ತಿಕೊಳ್ಳಿ', ಎಂದು ಕೇಳಿಕೊಂಡಿದ್ದಾರೆ. 
 
ದಿನಾಂಕ ತೋರಿಸದ ವಿಡಿಯೋ ಸಿಂಗ್ ಲಕ್ನೋ ವಿಶ್ವವಿದ್ಯಾಲಯದಲ್ಲಿ ಆಡಿದ ಭಾಷಣವನ್ನು ಹೊಂದಿದೆ. ಅದರಲ್ಲಿ ಅವರು, 'ಸಂಪೂರ್ಣ ದೇಶದ ಜನರು ಕಾಶ್ಮೀರಿ ವಿದ್ಯಾರ್ಥಿಗಳನ್ನು ಸಹೋದರರಂತೆ ನೋಡಿಕೊಳ್ಳಬೇಕು ಮತ್ತು ಅವರ ಭದ್ರತೆಯನ್ನು ಖಚಿತ ಪಡಿಸಬೇಕು' ಎಂದು ಹೇಳಿದ್ದಾರೆ.
 
'ಯುವ ಜನಾಂಗ ನಮ್ಮ ದೇಶದ ಭವಿಷ್ಯ. ಆದರೆ ಕಾಶ್ಮೀರದಲ್ಲಿ ಮಕ್ಕಳು ಮತ್ತು ಯುವಜನಾಂಗ ತಮ್ಮ ಕೈಯ್ಯಲ್ಲಿ ಕಲ್ಲನ್ನು ಎತ್ತಿಕೊಂಡಿದೆ ಎಂದು ಹೇಳುವುದಕ್ಕೆ ನನಗೆ ನೋವಾಗುತ್ತಿದೆ. ಅವರು ಕೈಯ್ಯಲ್ಲಿ ಕಲ್ಲುಗಳನ್ನೆತ್ತಿಕೊಳ್ಳಬಾರದು, ಪೆನ್, ಕಂಪ್ಯೂಟರ್, ಪುಸ್ತಕವನ್ನು ಹಿಡಿದುಕೊಳ್ಳಬೇಕು. ಕೆಲ ಜನರು ತನ್ನ ಅನುಪಯುಕ್ತ ಹಿತಾಸಕ್ತಿಗಾಗಿ ಮಕ್ಕಳಿಗೆ ಕಲ್ಲೆತ್ತಿಕೊಳ್ಳುವಂತೆ ಪ್ರೇರೇಪಿಸುತ್ತಾರೆ. ಅವರ (ಮಕ್ಕಳ) ಭವಿಷ್ಯದ ಜತೆ ಆಟವಾಡಿದಂತಾಗುವುದಿಲ್ಲವೇ ಇದು? ತಮ್ಮ ಸ್ವಂತ ಮಕ್ಕಳಿಗೆ ಶಿಕ್ಷಣವನ್ನು ತ್ಯಜಿಸಿ ಕಲ್ಲೆತ್ತಿಕೊಳ್ಳುವಂತೆ ಅವರು ಹೇಳುತ್ತಾರೆಯೇ?', ಎಂದು ಪ್ರತ್ಯೇಕತಾವಾದಿಗಳಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. 
 
ಇಂತಹ ಕೃತ್ಯಗಳಿಗೆ ಪ್ರೇರೇಪಣೆ ನೀಡುವವರೊಂದಿಗೆ ನಾನೊಂದು ಮನವಿ ಮಾಡಿಕೊಳ್ಳ ಬಯಸುತ್ತೇನೆ. ಕಲ್ಲನ್ನೆತ್ತಿಕೊಳ್ಳಲು ಕಾಶ್ಮೀರದ ಮಕ್ಕಳ ಮೇಲೆ ನಿಮ್ಮ ಪ್ರಭಾವ ಬೀರದಿರಿ.  ಅವರಿಗೆ ಸಮಸ್ಯೆ ಇದ್ದರೆ ಪ್ರತಿಭಟನೆ ಸಹಾಯ ಮಾಡಲಾದು. ಕೇವಲ ಮಾತುಕತೆಯೊಂದೇ ಸಮಸ್ಯೆ ಪರಿಹಾರಕ್ಕೆ ಸಹಾಯ ಮಾಡಬಲ್ಲದು ಎಂದು ಅವರು ಹೇಳಿದ್ದಾರೆ. 
 
'ನಾವು ಕೇವಲ ಕಾಶ್ಮೀರದ ಭೂಮಿಯನ್ನು ಪ್ರೀತಿಸುವುದಿಲ್ಲ. ಅಲ್ಲಿಯ ಜನರನ್ನು ಸಹ ಪ್ರೇಮಿಸುತ್ತೇವೆ. ಕಾಶ್ಮೀರದಲ್ಲಿ ಶಾಂತಿ ಮತ್ತು ಸಹಜ ಸ್ಥಿತಿ ಮರಳಬೇಕು. ನಾವು ಅವರ ಜತೆ ಮಾತನ್ನಾಡುತ್ತೇವೆ. ಅವರು ನಮ್ಮ ಜನ ಎಂದಿದ್ದಾರೆ', ಸಿಂಗ್.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ .

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments