ಲಕ್ನೋ: ಉತ್ತರ ಪ್ರದೇಶದಲ್ಲಿ ಜನರಿಗೆ ಮೋಸ ಮಾಡುತ್ತಿದ್ದ ಪೆಟ್ರೋಲ್ ಬಂಕ್ ಒಂದರ ಮೇಲೆ ಅಧಿಕಾರಿಗಳು ದಾಳಿ ನಡೆಸಲೆಂದು ಬರುವಾಗ ಪೆಟ್ರೋಲ್ ಬಂಕ್ ಇದ್ದಕ್ಕಿದ್ದಂತೆ ನಾಪತ್ತೆಯಾಗಿತ್ತು!
ಪೆಟ್ರೋಲ್ ಬಂಕ್ ಮೆಷಿನ್ ಗಳನ್ನು ಸ್ಥಳದಿಂದ ಸಾಗಿಸಿ ಅಡಗಿಸಿಟ್ಟ ಆರೋಪಿಗಳು ಅಧಿಕಾರಿಗಳಿಗೇ ಚಳ್ಳೆ ಹಣ್ಣು ತಿನ್ನಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಅಕ್ರಮ ಪೆಟ್ರೋಲ್ ಬಂಕ್ ಗಳ ಮೇಲೆ ಅಧಿಕಾರಿಗಳು ರೇಡ್ ನಡೆಸುತ್ತಿದ್ದಾರೆ.
ಅಧಿಕಾರಿಗಳು ಸ್ಥಳಕ್ಕೆ ಬರುವಾಗ ಮೆಷಿನ್ ಗಳನ್ನು ಸ್ಥಳಾಂತರಿಸಿದ್ದಲ್ಲದೆ, ಹೆಚ್ಚು ಬೆಲೆ ತೋರಿಸಿ ಕಡಿಮೆ ಪೆಟ್ರೋಲ್ ಒದಗಿಸುವ ವಿಶೇಷ ಸಾಧನವನ್ನೂ ಅಡಗಿಸಿಡಲಾಗಿದೆ. ಕಳೆದ ವಾರ ಉತ್ತರ ಪ್ರದೇಶ ಪೊಲೀಸರು ರಿಮೋಟ್ ಕಂಟ್ರೋಲ್ ಚಾಲಿತ ಚಿಪ್ ಗಳಿಂದ ಜನರಿಗೆ ಮೋಸ ಮಾಡುವ ಜಾಲ ಪತ್ತೆ ಹಚ್ಚಿದ್ದರು.
ಇದರಿಂದಾಗಿ ಪ್ರತಿ ದಿನಕ್ಕೆ 15 ಲಕ್ಷ ರೂ. ಪೆಟ್ರೋಲ್ ಕಳ್ಳತನ ಮಾಡಲಾಗುತ್ತಿತ್ತು. ಈ ಸಂಬಂಧ 9 ಪೆಟ್ರೋಲ್ ಬಂಕ್ ಗಳನ್ನು ಸೀಝ್ ಮಾಡಲಾಗಿತ್ತು. ಅಲ್ಲದೆ 23 ಮಂದಿಯನ್ನು ಬಂಧಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ