ಹರ್ಯಾಣ: ವಿಜಯದಶಮಿ ಪ್ರಯುಕ್ತ ಕಾರ್ಯಕ್ರಮ ವೀಕ್ಷಿಸುತ್ತಿದ್ದಾಗ ಪಂಜಾಬ್ ನ ಜೋದಾ ಪಾಟ್ಕರ್ ನಲ್ಲಿ ನಡೆದ ರೈಲು ದುರಂತ ಸಂಭವಿಸುವ ವೇಳೆ ಜನರು ಹಳಿ ಮೇಲೆ ನಿಂತು ಸೆಲ್ಫೀ ಕ್ಲಿಕ್ಕಿಸುತ್ತಿದ್ದರು ಎನ್ನಲಾಗಿದೆ.
ರಾವಣನ ಪ್ರತಿಕೃತಿ ದಹಿಸುವ ಆಚರಣೆ ವೇಳೆ ಜೋರಾಗಿ ಪಟಾಕಿ ಸದ್ದು ಇತ್ತು. ಇದರಿಂದಾಗಿ ಜನರಿಗೆ ರೈಲು ಬರುವ ಸದ್ದು ಕೇಳಿಸಲಿಲ್ಲ. ಹೀಗಾಗಿ ರೈಲು ಹಳಿ ಮೇಲೆ ನಿಂತು ಮೊಬೈಲ್ ನಲ್ಲಿ ಸೆಲ್ಫೀ ಕ್ಲಿಕ್ಕಿಸುತ್ತಿದ್ದರಲ್ಲದೆ, ರಾವಣನನ್ನು ಸುಡುವ ಪ್ರಕ್ರಿಯೆಯನ್ನು ಚಿತ್ರೀಕರಿಸುತ್ತಿದ್ದರು.
ಹೀಗಾಗಿ ಅತೀ ಹೆಚ್ಚು ಸಾವು ನೋವುಗಳು ಸಂಭವಿಸಿತು ಎನ್ನಲಾಗಿದೆ. ಇದೇ ವೇಳೆ ಇದು ಅಪಾಯಕಾರಿ ಸ್ಥಳ ಎಂದು ಗೊತ್ತಿದ್ದರೂ ಕಾರ್ಯಕ್ರಮ ಆಯೋಜಿಸಲು ಅನುಮತಿ ನೀಡಿದ ಪೊಲೀಸರ ಮೇಲೂ ತೀವ್ರ ಆಕ್ಷೇಪ ಕೇಳಿಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.