ಮಿಸ್ ಬ್ರ್ಯಾಂಡಿಂಗ್ ಮತ್ತು ದಾರಿ ತಪ್ಪಿಸುವ ಜಾಹೀರಾತಿಗಾಗಿ ಪತಂಜಲಿ ಆಯುರ್ವೇದಿಕ್ ಸಂಸ್ಥೆಯ ಮೇಲೆ ಚಾಟಿ ಬೀಸಿರುವ ಸ್ಥಳೀಯ ಕೋರ್ಟ್ ಅದರ 5 ಉತ್ಪನ್ನಗಳ ಯೂನಿಟ್ ಮೇಲೆ 11 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಈ ಕುರಿತು ವಿಚಾರಣೆ ನಡೆಸಿದ ಹರಿದ್ವಾರದ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ನಾರಾಯಣ ಮಿಶ್ರಾ ಕೋರ್ಟ್, ತಿಂಗಳೊಳಗೆ ದಂಡವನ್ನು ಕಟ್ಟುವಂತೆ ಆದೇಶಿಸಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ 2006ರ ಸೆಕ್ಷನ್-52, 53 ಮತ್ತು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆಯ 23.1ರ ಅಡಿಯಲ್ಲಿ ಈ ದಂಡವನ್ನು ವಿಧಿಸಲಾಗಿದೆ.
2012ರಲ್ಲಿ ಪತಂಜಲಿ ವಿರುದ್ಧ ದೂರು ದಾಖಲಾಗಿತ್ತು. ದೂರಿನಲ್ಲಿ ಪತಂಜಲಿ ಉತ್ಪನ್ನಗಳು ಜಾಹೀರಾತನಲ್ಲಿ ಹೇಳಿರುವಷ್ಟು ಉನ್ನತ ಗುಣಮಟ್ಟದ್ದೇನೂ ಅಲ್ಲ ಎಂದು ಹೇಳಲಾಗಿತ್ತು. ಪತಂಜಲಿ ಸಂಸ್ಥೆಯ ಜೇನುತುಪ್ಪ, ಸಾಸಿವೆ ಎಣ್ಣೆ ಸೇರಿದಂತೆ ಕೆಲ ಉತ್ಪನ್ನಗಳನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಪರೀಕ್ಷೆಯಲ್ಲಿ ಈ ಪದಾರ್ಥಗಳು ಉತ್ತಮ ಗುಣಮಟ್ಟದ್ದಲ್ಲ ಎಂದು ಗೊತ್ತಾಗಿದೆ.