ನವದೆಹಲಿ(ಮಾ.10): ಉದ್ಯೋಗಸ್ಥ ಮಹಿಳೆಯರಿಗೆ ನೀಡಲಾಗುವ ಹೆರಿಗೆ ರಜೆಯನ್ನ 12ರಿಂದ 26 ವಾರಗಳಿಗೆ ಹೆಚ್ಚಿಸುವ ಮಹತ್ವದ ಮಸೂದೆಗೆ ಗುರುವಾರ ಸಂಸತ್ತಿನ ಅನುಮೋದನೆ ಸಿಕ್ಕಿದೆ. ದೇಶದ 18 ಲಕ್ಷ ಉದ್ಯೋಗಸ್ಥ ಮಹಿಳೆಯರು ಇದರ ಅನುಕೂಲ ಪಡೆಯಲಿದ್ದಾರೆ.
10 ಅಥವಾ ಅದಕ್ಕಿಂತ ಹೆಚ್ಚು ಉದ್ಯೋಗಿಗಳಿರುವ ಸಂಸ್ಥೆಗಳಿಗೆ ಈ ಕಾನೂನು ಅನ್ವಯವಾಗುತ್ತಿದ್ದು, ಮೊದಲೆರಡು ಮಕ್ಕಳಿಗೆ 26 ತಿಂಗಳ ರಜೆ ಸಿಗಲಿದೆ. 3ನೇ ಮಗುವಿಗೆ ಹಳೆಯ ಮಾದರಿಯಲ್ಲೇ 12 ವಾರ ರಜೆ ಸಿಗಲಿದೆ.
ಈ ವಿಶಿಷ್ಟ ಮಸೂದೆ ಮೂಲಕ ವಿಶ್ವದಲ್ಲಿ ಅತಿ ಹೆಚ್ಚು ಹೆರಿಗೆ ರಜೆ ನೀಡುತ್ತಿರುವ 3ನೇ ದೇಶ ಎಂಬ ಖ್ಯಾತಿಗೆ ಭಾರತ ಪಾತ್ರವಾಗಿದೆ. ಕೆನಡಾ ಮತ್ತು ನಾರ್ವೆ ದೇಶಗಳು ಕ್ರಮವಾಗಿ 50 ಮತ್ತು 44 ವಾರಗಳ ಹೆರಿಗೆ ರಜೆ ನೀಡುತ್ತಿವೆ.
ಮಹತ್ವದ ಹೆರಿಗೆ ಸೌಲಭ್ಯ ಮಸೂದೆಗೆ ಕಳೆದ ವರ್ಷ ಆಗಸ್ಟ್`ನಲ್ಲೇ ರಾಜ್ಯಸಭೆ ಅಂಗೀಕಾರ ಸಿಕ್ಕಿತ್ತು. ಇದೀಗ, ಲೋಕಸಭೆ ಅನುಮೋದನ ಸಿಕ್ಕಿದೆ.