ಮುಂಬೈ: ಅನಿಲ್ ಅಂಬಾನಿ ಮನೆಯಲ್ಲಿ ಭದ್ರತಾ ವೈಫಲ್ಯದ ಕಾರಣದಿಂದಾಗಿ ಏಕಾಏಕಿ ವರ್ಗಾವಣೆಯಾಗಿರುವ ಮುಂಬೈ ಮಾಜಿ ಪೊಲೀಸ್ ಕಮಿಷನರ್ ಪರಂಬೀರ್ ಸಿಂಗ್ ಮಹಾರಾಷ್ಟ್ರ ಗೃಹಸಚಿವರ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದಾರೆ.
ಅನಿಲ್ ಅಂಬಾನಿ ಭದ್ರತಾ ವೈಫಲ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ ಎನ್ ಐಎ ಬಂಧಿಸಿರುವ ಎನ್ ಕೌಂಟರ್ ಸಚಿನ್ ವಾಝೆ ಅವರಿಗೆ ಗೃಹ ಸಚಿವ ಅನಿಲ್ ದೇಶ್ ಮುಖ್ ಪ್ರತೀ ತಿಂಗಳು ಬಾರ್, ರೆಸ್ಟಾರೆಂಟ್ ಇತ್ಯಾದಿ ಸಂಸ್ಥೆಗಳಿಂದ 100 ಕೋಟಿ ರೂ. ಸಂಗ್ರಹಿಸಿಕೊಡಲು ತಾಕೀತು ಮಾಡಿದ್ದರು ಎಂದು ಆರೋಪಿಸಿದ್ದಾರೆ.
ನಿರ್ಗಮಿಸುವ ಸಂದರ್ಭದಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಪತ್ರ ಬರೆದಿರುವ ಪರಂಬೀರ್ ಸಿಂಗ್ ಗೃಹಸಚಿವರು ಪೊಲೀಸರ ಕೆಲಸದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದರು, ಹಣ ಸಂಗ್ರಹಿಸುವಂತೆ ಬೇಡಿಕೆಯಿಡುತ್ತಿದ್ದರು ಎಂದು ಆರೋಪಿಸಿದ್ದಾರೆ. ಇದು ಭಾರೀ ಸಂಚಲನ ಮೂಡಿಸಿದೆ. ಇನ್ನೊಂದೆಡೆ ಈ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಅನಿಲ್ ದೇಶ್ ಮುಖ್ ಅಧಿಕಾರ ಕಳೆದುಕೊಂಡ ಹತಾಶೆಯಲ್ಲಿ ಪರಂಬೀರ್ ಸಿಂಗ್ ಇಂತಹ ಆರೋಪ ಮಾಡುತ್ತಿದ್ದಾರೆ ಎಂದಿದ್ದಾರೆ.