ವಿಶೇಷ ಅಧಿವೇಶನದಲ್ಲಿ ಪಳನಿಸ್ವಾಮಿಯ ಬಹುಮತದ ಅಗ್ನಿ ಪರೀಕ್ಷೆಯಲ್ಲಿ ವಿರುದ್ಧವಾಗಿ ಮತ ಚಲಾಯಿಸಲು ಮಾಜಿ ಸಿಎಂ ಪನ್ನೀರ್ ಸೆಲ್ವಂ ಬಣ ನಿರ್ಧರಿಸಿದೆ.
ವಿಶೇಷ ಅಧಿವೇಶನದಲ್ಲಿ ಬಹುಮತ ಯಾಚಿಸುವ ಸಂದರ್ಭದಲ್ಲಿ ಬಹಿರಂಗ ಮತದಾನ ಮಾಡಬೇಕೋ ಅಥವಾ ರಹಸ್ಯ ಮತದಾನ ಮಾಡಬೇಕೋ ಎನ್ನುವ ಬಗ್ಗೆ ಸಭಾಪತಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಮ್ಮನ ಪರವಾಗಿ ಮತಯಾಚಿಸಲು ನಿರ್ಧರಿಸಿರುವ ಸೆಲ್ವಂ, ಪಳನಿಸ್ವಾಮಿ ವಿರುದ್ಧ ಮತ ಚಲಾಯಿಸುವಂತೆ ಎಐಎಡಿಎಂಕೆ ಶಾಸಕರಿಗೆ ಮನವಿ ಮಾಡಿದ್ದಾರೆ.
ಶಶಿಕಲಾ ಬಣ ಹಿಂದೆ ಪನ್ನೀರ್ ಸೆಲ್ವಂ ಮತ್ತು ಅವರ ಬೆಂಬಲಿಗ ಶಾಸಕರನ್ನು ವಜಾಗೊಳಿಸಿದ್ದಂತೆ, ಇಂದು ಪನ್ನೀರ್ ಸೆಲ್ವಂ ಬಣ ಶಶಿಕಲಾ ಕುಟುಂಬದವರನ್ನು ಉಚ್ಚಾಟಿಸಿ ಆದೇಶ ಹೊರಡಿಸಿದೆ. ಎಐಎಡಿಎಂಕೆ ಪಕ್ಷದಲ್ಲಿ ಭಿನ್ನಮತ ಸ್ಫೋಟ ಮುಂದುವರೆದಿರುವಂತೆಯೇ ಇತ್ತ ಉಚ್ಛಾಟನಾ ಪರ್ವ ಕೂಡ ಮುಂದುವರೆದಿದೆ.
ಅಧಿಕಾರಕ್ಕೇರಿರುವ ಪಳನಿ ಸ್ವಾಮಿ ನೇತೃತ್ವದ ನೂತನ ಸರ್ಕಾರದ ವಿರುದ್ಧ ತಾವು ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಪನ್ನೀರ್ ಸೆಲ್ವಂ ಬಣದ ಶಾಸಕರು ಘೋಷಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.