ನಾಳೆ ವಿಶೇಷ ಅಧಿವೇಶನದಲ್ಲಿ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಬಹುಮತ ಸಾಬೀತುಪಡಿಸಲಿರುವ ಹಿನ್ನೆಲೆಯಲ್ಲಿ, ಮಾಜಿ ಸಿಎಂ ಪನ್ನೀರ್ ಸೆಲ್ವಂ ಸಭಾಪತಿಯವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ವಿಧಾನಸಭೆಯಲ್ಲಿ ಪ್ರತ್ಯೇಕ ಆಸನ ಮಾಡುವಂತೆ ಸಭಾಪತಿ ಧನಪಾಲ್ ಅವರಿಗೆ ಸೆಲ್ವಂ ಬಣ ಮನವಿ ಮಾಡಿದೆ.
ವಿಶೇಷ ಅಧಿವೇಶನದಲ್ಲಿ ಬಹುಮತ ಯಾಚಿಸುವ ಸಂದರ್ಭದಲ್ಲಿ ಬಹಿರಂಗ ಮತದಾನ ಮಾಡಬೇಕೋ ಅಥವಾ ರಹಸ್ಯ ಮತದಾನ ಮಾಡಬೇಕೋ ಎನ್ನುವ ಬಗ್ಗೆ ಸಭಾಪತಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಮ್ಮನ ಪರವಾಗಿ ಮತಯಾಚಿಸಲು ನಿರ್ಧರಿಸಿರುವ ಸೆಲ್ವಂ, ಪಳನಿಸ್ವಾಮಿ ವಿರುದ್ಧ ಮತ ಚಲಾಯಿಸುವಂತೆ ಎಐಎಡಿಎಂಕೆ ಶಾಸಕರಿಗೆ ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.