ಚೆನ್ನೈ: ಶಶಿಕಲಾ ನಟರಾಜನ್ ವಿರುದ್ಧ ಬಂಡಾಯವೆದ್ದಿರುವ ಹಂಗಾಮಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಜಯಲಲಿತಾ ನಿವಾಸವನ್ನು ಸ್ಮಾರಕವಾಗಿಸುವ ಆದೇಶ ಮಾಡಿದ್ದಾರೆ. ಈ ಮೂಲಕ ಪೊಯೆಸ್ ಗಾರ್ಡನ್ ನಿವಾಸದಲ್ಲಿ ಬೀಡು ಬಿಟ್ಟಿರುವ ಶಶಿಕಲಾರನ್ನು ಹೊರದಬ್ಬಲು ತಂತ್ರ ಮಾಡಿದ್ದಾರೆ.
ಅಲ್ಲದೆ ಶಶಿಕಲಾ ವಶದಲ್ಲಿರುವ ಶಾಸಕರ ಮೊಬೈಲ್ ಸಂಖ್ಯೆಗಳನ್ನು ಸೆಲ್ವಂ ಬೆಂಬಲಿಗರು ಸಾರ್ವಜನಿಕರಿಗೆ ಹಂಚಿದ್ದು, ಆ ಮೂಲಕ ಶಶಿಕಲಾ ವಿರೋಧಿ ಅಲೆ ಇದೆ ಎಂದು ಸಾರ್ವಜನಿಕರಿಂದ ಹೇಳಿಸುವ ಪ್ರಯತ್ನ ಮಾಡಿದ್ದಾರೆ.
ಇನ್ನೊಂದೆಡೆ ಸಾಮಾಜಿಕ ಜಾಲತಾಣಗಳಲ್ಲಿ ಶಶಿಕಲಾ ನಟರಾಜ್ ಸಿಎಂ ಆಗುವುದು ಬೇಡ ಎಂಬ ಅಭಿಯಾನ ಆರಂಭವಾಗಿದೆ. ವಿಶೇಷವೆಂದರೆ ಹೆಚ್ಚಿನವರು ಸೆಲ್ವಂ ಪರ ಮತ ಹಾಕಿದ್ದಾರೆ. ಇದೀಗ ಜಯಲಲಿತಾ ನಿವಾಸ ಸ್ಮಾರಕವಾದರೆ ಶಶಿಕಲಾ ಆ ನಿವಾಸವನ್ನು ಬಿಟ್ಟು ತೆರಳಲೇಬೇಕಾಗುತ್ತದೆ. ಈ ಮೂಲಕ ಎಲ್ಲಾ ಕಡೆಯಿಂದ ಶಶಿಕಲಾಗೆ ಒತ್ತಡ ಹೇರುವ ತಂತ್ರ ರೂಪಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ