ಕಪಟಿ ಪಾಕಿಸ್ತಾನ ಯುದ್ಧಕ್ಕೆ ಸಿದ್ಧವಾಗಿದೆಯಾ..? ಇಂಥದ್ದೊಂದು ಸುದ್ದಿಯನ್ನ ಪಾಕಿಸ್ತಾನ ಮಾಧ್ಯಮಗಳೇ ಮಾಡಿವೆ. ಯುದ್ಧಕ್ಕೆ ಪಾಕಿಸ್ತಾನದ ಯುದ್ಧ ವಿಮಾನಗಳು ತಾಲೀಮು ನಡೆಸುತ್ತಿದ್ದು, ಭಾರತದ ಸಿಯಾಚಿನ್ ಆಗಸದಲ್ಲಿ ಹಾರಾಟ ನಡೆಸಿವೆ ಎಂದು ವರದಿ ಮಾಡಿವೆ.
ಆದರೆ, ಈ ವರದಿಗಳನ್ನ ಭಾರತದ ವಾಯುಸೇನೆ ತಳ್ಳಿಹಾಕಿದೆ. ಪಾಕಿಸ್ತಾನದಿಂದ ಯಾವುದೇ ವಾಯುಗಡಿ ಉಲ್ಲಂಘನೆಯಾಗಿಲ್ಲ. ಸಿಯಾಚಿನ್ ಬಳಿ ಪಾಕ್ ವಿಮಾನಗಳು ಹಾರಾಟ ನಡೆಸಿಲ್ಲ ೆಂದು ಸ್ಪಷ್ಟಪಡಿಸಿದೆ.
ಯುದ್ಧ ತಾಲೀಮಿನ ಭಾಗವಾಗಿ ಪಾಕಿಸ್ತಾನದ ಮಿರೇಜ್ ಫೈಟರ್ ಜೆಟ್ ಸಿಯಾಚಿನ್ ಬಳಿ ಹಾರಾಟ ನಡೆಸಿದ್ದು, ವಾಯುಸೇನೆ ಮುಖ್ಯಸ್ಥ ಸೊಹೈಲ್ ಅಮಾನ್ ಈ ತಾಲೀಮನ್ನ ಮೇಲ್ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭ ವಾಯುಸೇನೆಯ ಹಿರಿಯ ಅಧಿಕಾರಿಗಳೂ ಇದ್ದರು ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿದ್ದವು.
ಪಾಕಿಸ್ತಾನ ಬಂಕರ್`ಗಳ ಮೇಲೆ ದಾಳಿ ನಡೆಸಿದ ವಿಡಿಯೋವನ್ನ ಭಾರತದ ಸೇನೆ ಬಿಡುಗಡೆಗೊಳಿಸಿದ ಮಾರನೆಯ ದಿನವೇ ಪಾಕಿಸ್ತಾನದ ಕಡೆಯಿಂದ ಇಂಥದ್ದೊಂದು ವರದಿ ಬಂದಿರುವುದು ಗಮನಾರ್ಹ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ