ಪಾಕಿಸ್ತಾನದಿಂದ ಕಡೆಯಿಂದ ಭಾರತವನ್ನ ಕೆಣಕುವ ಯತ್ನ ಮುಂದುವರೆದಿದೆ. ನ್ಯಾಯಾಧೀಶರ ಫೋಟೋ ಕ್ಲಿಕ್ಕಿಸಿದರೆಂಬ ಆರೋಪ ಹೊರಿಸಿ ಇಸ್ಲಾಮಾಬಾದ್ ಹೈಕೋರ್ಟ್ ಭಾರತದ ಹೈಕಮೀಷನ್`ನ ಪ್ರಥಮ ಕಾರ್ಯದರ್ಶಿಯ ಮೊಬೈಲ್ ಫೋನ್ ಕಸಿದುಕೊಂಡಿದೆ ಎಂದು ವರದಿಯಾಗಿದೆ.
ಎಕ್ಸ್`ಪ್ರೆಸ್ ಟ್ರಿಬ್ಯೂನ್ ವರದಿಯ ಪ್ರಕಾರ, ರಾಜತಾಂತ್ರಿಕ ಅಧಿಕಾರಿ ಪಿಯೂಸ್ ಸಿಂಗ್ ಅವರನ್ನ ಮೊಬೈಲನ್ನ ಕೋರ್ಟ್ ವಶಕ್ಕೆ ಪಡೆದಿದೆ. ಗನ್ ಪಾಯಿಂಟ್`ನಲ್ಲಿ ಬಲವಂತವಾಗಿ ನನ್ನನ್ನ ಪಾಕಿಸ್ತಾನದ ಪುರುಷ ವಿವಾಹವಾಗಿದ್ದಾನೆಂದು ಭಾರತ ಮೂಲದ ಮಹಿಳೆ ದಾಖಲಿಸಿದ್ದ ಕೇಸ್ ವಿಚಾರಣೆ ವೇಲೆ ಜಸ್ಟೀಸ್ ಮೊಹ್ಸಿನ್ ಅಖ್ತರ್ ಕಯಾನಿ ಫೋಟೋ ಕ್ಲಿಕ್ಕಿಸಿದ ಆರೋಪ ಕೇಳಿಬಂದಿದೆ.
ಕ್ಷಮೆ ಕೇಳಿದರೂ ಸುಮ್ಮನಾಗದ ನ್ಯಾಯಾಧೀಶರು ಬರವಣಿಗೆಯಲ್ಲಿ ಕ್ಷಮೆಯಾಚನೆ ಬರೆದುಕೊಡುವಂತೆ ಆದೇಶ ಮಾಡಿದ್ದು, ಲಿಖಿತ ಲಿಖಿತ ಕ್ಷಮೆ ಬರೆದು ಕೊಟ್ಟಿದ್ದಾರೆಂದು ವರದಿಯಾಗಿದೆ. .
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ