ಅಯೋಧ್ಯೆ : ಕನ್ನಡದವರೇ ಆದ ಮೈಸೂರು ಮೂಲದ ಅರುಣ್ ಯೋಗಿರಾಜ್ ಕೆತ್ತಿರುವ ರಾಮಲಲ್ಲಾನ ವಿಗ್ರಹ ಪ್ರತಿಷ್ಠಾಪನೆಗೆ ಆಯ್ಕೆಯಾಗಿದೆ. ಪ್ರತಿಷ್ಠಾಪನಾ ಕಾರ್ಯದ ಬಳಿಕವಷ್ಟೇ ರಾಮಲಲ್ಲಾನ ಪೂರ್ತಿ ದರ್ಶನ ಜನರಿಗೆ ಲಭಿಸಲಿದೆ.
ಅರುಣ್ ಯೋಗಿರಾಜ್ ನಿರ್ಮಿಸಿರುವ ಮೂರ್ತಿ ಬೇರೆಲ್ಲಾ ಮೂರ್ತಿಗಳಿಗಿಂತ ಮನೋಹರವಾಗಿ, ಆಕರ್ಷಕವಾಗಿದೆ ಎಂದು ಅಯೋಧ್ಯಾ ತೀರ್ಥ ಕ್ಷೇತ್ರ ಟ್ರಸ್ಟ್ ಸದಸ್ಯರು ಹೇಳಿಕೆ ನೀಡಿದ್ದರು.
ರಾಮಮಂದಿರದಲ್ಲಿ ರಾಮನ ಪ್ರತಿಷ್ಠಾಪನೆಗೆ ಇನ್ನು ಕೇವಲ ಮೂರು ದಿನಗಳಷ್ಟೇ ಉಳಿದಿವೆ. ಬುಧವಾರ ರಾಮಲಲ್ಲಾನ ಮೂರ್ತಿಯನ್ನು ಮಂದಿರದೊಳಗೆ ಸಾಗಿಸಲಾಗಿದ್ದು, ಈಗ ರಾಮಲಲ್ಲಾನ ಚಿತ್ರವೂ ಸಹ ಬಹಿರಂಗಗೊಂಡಿದೆ. ಕಣ್ಣಿಗೆ ಪಟ್ಟಿ ಕಟ್ಟಿರುವ ರಾಮ ಲಲ್ಲಾನ ಮುಗುಳ್ನಗೆ ಅಸಂಖ್ಯಾತ ಮಂದಿ ಭಾರತೀಯರ ಮನ ಸೂರೆಗೊಂಡಿದೆ.