ದಕ್ಷಿಣ ಏಷ್ಯಾದ ಏಕೈಕ ರಾಷ್ಟ್ರ ಭಯೋತ್ಪಾದನೆಯನ್ನು ಹರಡುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಪಾಕಿಸ್ತಾನದ ವಿರುದ್ಧ ಪರೋಕ್ಷವಾಗಿ ಆರೋಪ ಮಾಡಿದರು.
ಚೀನಾದ ಹಾಂಗ್‌ಜೋನಲ್ಲಿ ಜಿ 20 ಶೃಂಗಸಭೆಯ ಕೊನೆ ದಿನದಂದು ಭಯೋತ್ಪಾದನೆ ಪ್ರವರ್ತಕರ ವಿರುದ್ಧ ತಮ್ಮ ದಾಳಿಯನ್ನು ಪ್ರಧಾನಮಂತ್ರಿ ಮುಂದುವರಿಸಿ, ಹಿಂಸಾಚಾರ ಮತ್ತು ಭಯೋತ್ಪಾದನೆ ಉಲ್ಪಣಿಸುವ ಶಕ್ತಿಗಳು ಮೂಲಭೂತ ಸವಾಲನ್ನು ಒಡ್ಡಿವೆ. ಕೆಲವು ರಾಷ್ಟ್ರಗಳು ರಾಜ್ಯ ನೀತಿಯ ಅಸ್ತ್ರವಾಗಿ ಅದನ್ನು ಬಳಸುತ್ತಿವೆ ಎಂದು ಮೋದಿ ಪ್ರತಿಪಾದಿಸಿದರು.
ಪ್ರಧಾನ ಮಂತ್ರಿ ಒಂದು ರಾಷ್ಟ್ರ ಭಯೋತ್ಪಾದನೆ ಹರಡುತ್ತಿದೆ ಎಂದು ಹೇಳಿದಾಗ ಅವರು ಯಾವ ರಾಷ್ಟ್ರವನ್ನು ಉಲ್ಲೇಖಿಸಿದ್ದಾರೆನ್ನುವುದನ್ನು ಹೇಳುವ ಅಗತ್ಯವಿರಲಿಲ್ಲ.
ಭಾರತ ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆ ನೀತಿಯನ್ನು ಹೊಂದಿದೆ. ನಮಗೆ ಭಯೋತ್ಪಾದಕರಲ್ಲಿ ಕೆಟ್ಟ ಭಯೋತ್ಪಾದಕ ಮತ್ತು ಒಳ್ಳೆಯ ಭಯೋತ್ಪಾದಕ ಎಂಬ ಭೇದಭಾವಿಲ್ಲ. ಭಯೋತ್ಪಾದಕ ಭಯೋತ್ಪಾದಕನೇ ಎಂದು ಹೇಳಿದರು.